×
Ad

ಜೆಫ್ರಿ ಎಪ್ಸ್ಟೀನ್ ಕಡತಗಳನ್ನು ಬಿಡುಗಡೆ ಮಾಡಿ: ಟ್ರಂಪ್‌ಗೆ ಎಲಾನ್‌ ಮಸ್ಕ್‌ ಆಗ್ರಹ

Update: 2025-07-13 14:49 IST

ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಕಡತಗಳನ್ನು ಈ ಮೊದಲು ನೀಡಿದ ವಾಗ್ದಾನದಂತೆ ಬಿಡುಗಡೆ ಮಾಡಿ ಎಂದು ಬಿಲಿಯನೇರ್ ಎಲಾನ್ ಮಸ್ಕ್ ತನ್ನ ಮಾಜಿ ಮಿತ್ರ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಗ್ರಹಿಸಿದ್ದಾರೆ.

ʼಎಪ್ಸ್ಟೀನ್ ಬಗ್ಗೆ ಮಾತನಾಡಬೇಡಿ ಎನ್ನುತ್ತಾ, ಅವರ ಹೆಸರನ್ನು ಆರು ಸಲ ಹೇಳಿದ್ರು, ಈ ಮೊದಲು ವಾಗ್ದಾನ ಮಾಡಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿʼ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಎಲಾನ್ ಮಸ್ಕ್ ಹೇಳಿದ್ದಾರೆ.

ಎಫ್‌ಬಿಐ ಮತ್ತು ಜಸ್ಟಿಸ್ ಡಿಪಾರ್ಟ್‌ಮೆಂಟ್‌ ಹೊರಡಿಸಿದ ವರದಿ ಎಪ್ಸ್ಟೀನ್ ಬಳಿ ಗ್ರಾಹಕರ ಪಟ್ಟಿ ಇಲ್ಲ, ಹಾಗೂ ಪ್ರಸಿದ್ಧ ಜನರನ್ನು ಬೆದರಿಸಿದ್ದೆಂಬ ಬಗ್ಗೆ ಮಾಹಿತಿ ಇಲ್ಲ. ಎಪ್ಸ್ಟೀನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಇದರಿಂದಾಗಿ ಟ್ರಂಪ್ ಸರಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಶನಿವಾರ ಟ್ರಂಪ್ ತಮ್ಮ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರನ್ನು ಟ್ರುತ್ ಸೋಶಿಯಲ್‌ ಪೋಸ್ಟ್‌ನಲ್ಲಿ ಸಮರ್ಥಿಸಿಕೊಂಡರು. ಬೈಡನ್ ಆಡಳಿತದ ಸದಸ್ಯರು ಈ ಕಡತಗಳನ್ನು ರಚಿಸಿದ್ದಾರೆ ಎಂದು ಆರೋಪಿಸಿದರು.

2024ರಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್, ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ಪ್ರಕರಣದ ಕಡತಗಳನ್ನು ಸಾರ್ವಜನಿಕಗೊಳಿಸುವ ಭರವಸೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News