×
Ad

ಕೇರಳ | ಮಗುಚಿದ ಹಡಗಿನಿಂದ ದಡ ಸೇರಿದ ಕಂಟೈನರ್‌ಗಳಲ್ಲಿ ಬೆಂಕಿ

Update: 2025-05-29 21:54 IST

PC : PTI 

ಕೊಚ್ಚಿ: ಕಳೆದ ವಾರ ಕೊಚ್ಚಿಯ ಸಮೀಪ ಮಗುಚಿದ ಸರಕು ಸಾಗಾಟದ ಹಡಗು ‘ಎಎಸ್‌ಸಿ ಎಲ್ಸಾ’ದಿಂದ ದಡ ಸೇರಿದ ಕಂಟೈನರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಅನಂತರ ಶಮನಗೊಳಿಸಲಾಯಿತು.

ಕಂಟೈನರ್‌ಗಳ ನಡುವಿನ ಥರ್ಮೋಕಾಲ್‌ನಂತಹ ವಸ್ತುವನ್ನು ತೆಗೆಯಲು ಗ್ಯಾಸ್ ಕಟ್ಟಿಂಗ್ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಗ್ಯಾಸ್ ಕಟ್ಟರ್ ಬಳಕೆಯಲ್ಲಿರುವ ಸಂದರ್ಭ ಹೊಗೆ ಹೊರಹೊಮ್ಮಿತು. ಅದು ಅನಂತರ ಬೆಂಕಿಯಾಗಿ ಉರಿಯಿತು. ಸಮುದ್ರದ ಬಲವಾದ ಗಾಳಿ ಬೆಂಕಿ ವ್ಯಾಪಿಸಲು ಕಾರಣವಾಯಿತು. ಕೂಡಲೇ ಸ್ಥಳದಲ್ಲಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಇದರಿಂದ ಬೆಂಕಿಯನ್ನು ಕೂಡಲೇ ನಂದಿಸಲು ಸಾಧ್ಯವಾಯಿತು ಮೂಲಗಳು ತಿಳಿಸಿವೆ.

‘‘ಮಗುಚಿದ ಹಡಗಿನಲ್ಲಿದ್ದ ಒಟ್ಟು 11 ಕಂಟೈನರ್‌ಗಳು ಶಕ್ತಿಕುಲಂಗರ ತೀರ ಸೇರಿವೆ. ಎರೆಡೆರೆಡು ಕಂಟೈನರ್‌ಗಳು ಜೋಡಣೆಯಾಗಿವೆ. ಜೋಡಣೆಯ ಭಾಗವನ್ನು ತೆರವುಗೊಳಿಸಿದ ಬಳಿಕ ಅವುಗಳನ್ನು ಪ್ರತ್ಯೇಕಿಸಲು ಯೋಜಿಸಲಾಗಿತ್ತು. ಕೆಲವು ಕಂಟೈನರ್‌ಗಳ ನಡುವೆ ಥರ್ಮೋಕಾಲ್‌ನಂತಹ ವಸ್ತುಗಳು ಇವೆ’’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News