ಕೇರಳದಲ್ಲಿ ಭಾರೀ ಮಳೆ; ವ್ಯಾಪಕ ಹಾನಿ
ತಿರುವನಂತಪುರ, ಜು. 26: ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಅಣೆಕಟ್ಟು ಹಾಗೂ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಆದುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ)7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರು, ಮಲಪ್ಪುರಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಬೆಳಗ್ಗೆ 3 ಗಂಟೆಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿತ್ತು.
ಕೋಝಿಕ್ಕೋಡ್ ನ ವಿವಿಧ ಭಾಗಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆ ಹಾಗೂ ಗಾಳಿಯಿಂದ ಮರಗಳು ಉರುಳಿವೆ. ಇದರಿಂದ ಹಲವು ಮನೆ, ವಾಹನಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್ ಕಂಬಗಳು ಉರುಳಿರುವುದರಿಂದ ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು.
ಇದೇ ಘಟನೆಗಳು ಕೊಟ್ಟಾಯಂ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಕೂಡ ವರದಿಯಾಗಿದೆ. ವಯನಾಡ್ ನ ಬಾಣಾಸುರ ಸಾಗರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಅಲಿಯಾರ್ ಅಣೆಕಟ್ಟಿನ ಶಟರ್ ಅನ್ನು ಮೇಲೆತ್ತಲಾಗಿದೆ. ಅಲ್ಲದೆ,