×
Ad

ಕೇರಳ | ಎಂಪಾಕ್ಸ್ ಸೋಂಕು ದೃಢ : ಆರೋಗ್ಯ ಇಲಾಖೆ

Update: 2024-09-18 20:27 IST

ಸಾಂದರ್ಭಿಕ ಚಿತ್ರ

ಮಲಪ್ಪುರಂ : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 38 ವರ್ಷದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬುಧವಾರ ಕೇರಳ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಯುಎಇಯಿಂದ ಕೇರಳಕ್ಕೆ ಮರಳಿದ್ದ ವ್ಯಕ್ತಿ ಅದಾಗಲೇ ಎಂಪಾಕ್ಸ್ ಸೋಂಕು ಲಕ್ಷಣಗಳಿಂದ ಬಳಲುತ್ತಿದ್ದರು. ಅವರನ್ನೀಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿದೇಶಗಳಿಂದ ಬರುವವರು ತಮಗೆ ಇಂತಹ ಸೋಂಕು ಇರುವುದು ಕಂಡು ಬಂದರೆ, ಕೂಡಲೇ ಈ ಮಾಹಿತಿಯನ್ನು ಆರೋಗ್ಯ ಪ್ರಾಧಿಕಾರಗಳಿಗೆ ನೀಡಬೇಕು ಹಾಗೂ ಚಿಕಿತ್ಸೆಯನ್ನು ಪಡೆಯಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಯುಎಇಯಿಂದ ಮರಳಿದ್ದ ವ್ಯಕ್ತಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ವರದಿಯಲ್ಲಿ ಎಂಪಾಕ್ಸ್ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News