×
Ad

ಮಧ್ಯಪ್ರದೇಶ | ಕುಬೇರೇಶ್ವರ ಧಾಮದಲ್ಲಿ ಕಾಲ್ತುಳಿತ; ಇಬ್ಬರು ಮಹಿಳೆಯರು ಮೃತ್ಯು, ಹಲವರಿಗೆ ಗಾಯ

Update: 2025-08-05 21:24 IST

PC : freepressjournal.in

ಭೋಪಾಲ್, ಜು. 5: ಮಧ್ಯಪ್ರದೇಶದ ಸೆಹೋರೆಯಲ್ಲಿರುವ ಕುಬೇರೇಶ್ವರ ಧಾಮದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಹಾಗೂ ಸುಮಾರು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕುಭೇರೇಶ್ವರ ಧಾಮಕ್ಕೆ ಭಕ್ತ ಸಾಗರ ಹರಿದ ಬಂದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಪೂಜಾ ಸಾಮಾಗ್ರಿಗಳ ಅಂಗಡಿಯ ಹೊರಗೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ ಸಂದರ್ಭ ಕಾಲ್ತುಳಿತ ಸಂಭವಿಸಿತು ಎಂದು ಮೂಲಗಳು ತಿಳಿಸಿವೆ.

4,000ಕ್ಕೂ ಅಧಿಕ ಭಕ್ತರಿಗೆ ವಾಸ್ತವ್ಯ ಮತ್ತು ಪ್ರಮಖ ಸ್ಥಳಗಳಲ್ಲಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಆಡಳಿತ ಹಾಗೂ ಸಂಘಟಕರು ಪ್ರತಿಪಾದಿಸಿರುವ ಹೊರತಾಗಿಯೂ ಕನ್ವಾರ್ ಯಾತ್ರೆಯ ಒಂದು ದಿನ ಮೊದಲು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಸಿಹೋರೆ ಶಾಸಕ ಸುದೇಶ್ ರಾಯ್, ‘‘ಇದು ದುರಾದೃಷ್ಟಕರ. ನಾನು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದೆ. ಆಡಳಿತ ಸಂಪೂರ್ಣ ವ್ಯವಸ್ಥೆ ಮಾಡಿತ್ತು. ಆದರೆ, ಭಕ್ತರ ಸಂಖ್ಯೆ ಅನಿರೀಕ್ಷಿತವಾಗಿ ಹೆಚ್ಚಾಯಿತು’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News