×
Ad

ಮಣಿಪುರ | ಕುಕಿ ಸಮುದಾಯಗಳಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚಿಸಬೇಕು: ಕುಕಿ ಸಂಘಟನೆಗಳ ಪಟ್ಟು

Update: 2025-11-08 22:00 IST

Photo Credit: The Hindu

ಇಂಫಾಲ: ಮಣಿಪುರವನ್ನು ವಿಭಜಿಸಿ, ಕುಕಿ ಸಮುದಾಯಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸಬೇಕು ಎಂಬ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯಯೇ ಇಲ್ಲ ಎಂದು ಕುಕಿ ಸಮುದಾಯದ 25 ಸಂಘಟನೆಗಳ ಒಕ್ಕೂಟ ಘೋಷಿಸಿದೆ.

ಕುಕಿ, ಝೋಮಿ ಹಾಗೂ ಹ್ಮಾರ್ ಬುಡಕಟ್ಟು ಸಮುದಾಯಗಳ ಸಂಘಟನೆಗಳನ್ನೊಳಗೊಂಡ ಕುಕಿ ನ್ಯಾಷನಲ್ ಆರ್ಗನೈಸೇಷನ್ ಹಾಗೂ ಯುನೈಟೆಡ್ ಪೀಪಲ್ಸ್ ಫ್ರಂಟ್ ಸಂಘಟನೆಗಳು 2008ರಲ್ಲಿ ಕೇಂದ್ರದೊಂದಿಗೆ ಏರ್ಪಟ್ಟಿದ್ದ ಕಾರ್ಯಾಚರಣೆ ಒಡಂಬಡಿಕೆಯ ಅಮಾನತಿಗೆ ಸಹಿ ಹಾಕಿವೆ.

ನವೆಂಬರ್ 6 ಮತ್ತು 7ರಂದು ಕೇಂದ್ರ ಗೃಹ ಸಚಿವಾಲಯದ ಈಶಾನ್ಯ ಭಾರತ ಸಲಹೆಗಾರ ಎ.ಕೆ.ಮಿಶ್ರಾರನ್ನು ಭೇಟಿ ಮಾಡಿದ್ದ ಈ ಸಂಘಟನೆಗಳ ಪ್ರತಿನಿಧಿಗಳು, ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕಾಗಿನ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಮೇ 3, 2023ರಂದು ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ಬಳಿಕ, ಮಣಿಪುರದಲ್ಲಿನ ಹಾಲಿ ಆಡಳಿತ ವ್ಯವಸ್ಥೆಯಡಿ ಮೈತೇಯಿ ಸಮುದಾಯದೊಂದಿಗೆ ಸಹಬಾಳ್ವೆ ಮಾಡುವುದು ಅಸಾಧ್ಯಾವಾಗಿದೆ ಎಂದು ಈ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.

“ದೇಶದ ಸ್ವಾತಂತ್ರ್ಯಕ್ಕೂ ಮುನ್ನ, ಕುಕಿ-ಝೋ ಬೆಟ್ಟಗಳೆಂದೂ ಆಗ ಅಸ್ವಿತ್ವದಲ್ಲಿದ್ದ ರಾಜ್ಯಾಡಳಿತಡಿ ಇರಲಿಲ್ಲ ಎಂಬ ರಾಜಕೀಯ ಬೇಡಿಕೆಗೆ ಚಾರಿತ್ರಿಕ ಸಮರ್ಥನೆಯಿದೆ. ಬ್ರಿಟಿಷರ ಆಡಳಿತದಲ್ಲಿ ಜಾರಿಗೆ ಬಂದ ಭಾರತ ಸರಕಾರ ಕಾಯ್ದೆ, 1935ರ ಅಡಿ, ಕುಕಿ-ಝೋ ಹಾಗೂ ಇನ್ನಿತರ ಬುಡಕಟ್ಟು ಪ್ರದೇಶಗಳನ್ನು ಕೈಬಿಟ್ಟ ಪ್ರದೇಶಗಳನ್ನಾಗಿ ವರ್ಗೀಕರಿಸಲಾಗಿತ್ತು” ಎಂದು ಶನಿವಾರ ಬಿಡುಗಡೆ ಮಾಡಿರುವ ಜಂಟಿ ಪ್ರಕಟನೆಯಲ್ಲಿ ಕುಕಿ ನ್ಯಾಷನಲ್ ಆರ್ಗನೈಸೇಷನ್ ಹಾಗೂ ಯುನೈಟೆಡ್ ಪೀಪಲ್ಸ್ ಫ್ರಂಟ್ ಸಂಘಟನೆಗಳು ಪ್ರತಿಪಾದಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News