×
Ad

ಕುಂಭಮೇಳದಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಸೇವನೆ ಮಾಡಲಾಗಿತ್ತು ಎಂದಿದ್ದ SP ಸಂಸದನ ವಿರುದ್ಧ ಎಫ್ಐಆರ್ ದಾಖಲು

Update: 2024-09-30 18:13 IST

 ಸಂಸದ ಅಫ್ಝಲ್ ಅನ್ಸಾರಿ | PC : PTI 

ಘಾಝಿಪುರ: ಕುಂಭಮೇಳದ ಸಂದರ್ಭದಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಸೇವಿಸಲಾಗಿದೆ ಎಂಬ ಹೇಳಿಕೆ ನೀಡಿದ್ದ ಸಮಾಜವಾದಿ ಸಂಸದ ಅಫ್ಝಲ್ ಅನ್ಸಾರಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ತಮ್ಮ ಹೇಳಿಕೆಗೆ ನಂತರ ಅಫ್ಝಲ್ ಅನ್ಸಾರಿ ಕ್ಷಮೆ ಯಾಚಿಸಿದ್ದರು.

ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳಲ್ಲಿ ಗಾಂಜಾವನ್ನು ಪ್ರಸಾದವನ್ನಾಗಿ ಸೇವಿಸುವುದರಿಂದ, ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕು ಎಂದೂ ಅನ್ಸಾರಿ ಕರೆ ನೀಡಿದ್ದರು.

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಘಾಜಿಪುರ್ ಸಂಸದ ಅನ್ಸಾರಿ, ಗೂಡ್ಸ್ ರೈಲಿನ ತುಂಬಾ ಗಾಂಜಾ ತುಂಬಿದ್ದರೂ, ಅದು ಕುಂಭಮೇಳಕ್ಕೆ ಸಾಲದಾಗಿತ್ತು ಎಂದು ಹೇಳಿದ್ದರು ಎಂದೂ ಆರೋಪಿಸಲಾಗಿದೆ.

ಅನ್ಸಾರಿ ಹೇಳಿಕೆಗೆ ಹಲವಾರು ಹಿಂದುತ್ವ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದವು.

ಸಂಸದ ಅಫ್ಝಲ್ ಅನ್ಸಾರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(3)ರ ಅಡಿ ಘಾಝಿಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News