×
Ad

ಅಬಕಾರಿ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

Update: 2025-12-03 21:53 IST

ನಿರ್ಮಲಾ ಸೀತಾರಾಮನ್ | Photo Credit : PTI 

ಹೊಸದಿಲ್ಲಿ,ಡಿ.3: ತಂಬಾಕು ಹಾಗೂ ಸಂಬಂಧಿತ ಉತ್ಪನ್ನಗಳಿಗೆ ಅಧಿಕ ಸುಂಕವನ್ನು ವಿಧಿಸಲು ಸರಕಾರಕ್ಕೆ ಅವಕಾಶ ನೀಡುವ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ 2025 ಅನ್ನು ಲೋಕಸಭೆಯಲ್ಲಿ ಬುಧವಾರ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

ಸೋಮವಾರ ಸದನದಲ್ಲಿ ಮಂಡಿಸಲಾದ ಈ ಮಸೂದೆಯು 1944ರ ಕೇಂದ್ರ ಅಬಕಾರಿ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿದೆ.

ಕೇಂದ್ರೀಯ ಅಬಕಾರಿ (ತಿದ್ದುಪಡಿ) ಮಸೂದೆ 2025, ಈಗ ಅಸ್ತಿತ್ವದಲ್ಲಿರುವ ಸಿಗರೇಟುಗಳು,ಜಗಿಯುವ ಹೊಗೆಸೊಪ್ಪು, ಸಿಗಾರ್‌ಗಳು, ಹುಕ್ಕಾ,ಝರ್ದಾ ಹಾಗೂ ಸುವಾಸನೆಯುಕ್ತ ತಂಬಾಕುಗಳ ಮೇಲಿನ ಜಿಎಸ್‌ಟಿ ಪರಿಹಾರ ಸೆಸ್ ಅನ್ನು ತೆರವುಗೊಳಿಸಿ, ಪರಿಷ್ಕೃತ ಅಬಕಾರಿ ಸುಂಕ ಸಂರಚನೆಯನ್ನು ಜಾರಿಗೆ ತರಲಿದೆ.

ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಮಸೂದೆಯು ತಂಬಾಕು ಮೇಲೆ ಯಾವುದೇ ಹೆಚ್ಚುವರಿತೆರಿಗೆಯನ್ನು ವಿಧಿಸುವುದಿಲ್ಲವೆಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News