×
Ad

75ನೇ ವಯಸ್ಸಿಗೆ ನಿವೃತ್ತಿಯಾಗಬೇಕು ಎಂದು ಹೇಳಿಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2025-08-29 12:43 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (File Photo: PTI)

ಹೊಸದಿಲ್ಲಿ: ಆರೆಸ್ಸೆಸ್, ಬಿಜೆಪಿ ನಾಯಕರು 75ನೇ ವಯಸ್ಸಿಗೆ ನಿವೃತ್ತರಾಗುತ್ತಾರೆ ಎಂಬ ಬಗ್ಗೆ ಚರ್ಚೆ ಮಧ್ಯೆ 75ನೇ ವಯಸ್ಸಿಗೆ ನಿವೃತ್ತಿಯಾಗಬೇಕು ಎಂದು ನಾನು ಹೇಳಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟನೆ ನೀಡಿದ್ದಾರೆ ಎಂದು deccanherald.com ವರದಿ ಮಾಡಿದೆ.

ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮದ ಕೊನೆಗೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮೋಹನ್ ಭಾಗವತ್, ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು 75ನೇ ವಯಸ್ಸಿಗೆ ನಿವೃತ್ತಿಯಾಗಬೇಕು ಎಂದು ನಾನು ಹೇಳಿಲ್ಲ. ಸಂಘ ಮತ್ತು ಅದರ ಅಂಗಸಂಸ್ಥೆಗಳು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಪ್ರತಿಯೊಬ್ಬರೂ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂದು ಹೇಳಿದ್ದಾರೆ.

“ಆರೆಸ್ಸೆಸ್ ಬೇಕೆಂದಷ್ಟೂ ನಾವು ಕೆಲಸ ಮಾಡುತ್ತೇವೆ” ಎಂದ ಮೋಹನ್ ಭಾಗವತ್, ಇತ್ತೀಚೆಗೆ ನಾಗಪುರದಲ್ಲಿ ನಿವೃತ್ತಿ ಕುರಿತು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಅಧ್ಯಕ್ಷರ ಆಯ್ಕೆ ತಡವಾಗಿರುವುದನ್ನು ಉಲ್ಲೇಖಿಸಿ, ನಾವು ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ, ಇಷ್ಟು ತಡವಾಗುತ್ತಿತ್ತೇ? ಎಂದು ಪ್ರಶ್ನಿಸಿದ ಮೋಹನ್ ಭಾಗವತ್, ಇದರಿಂದಾಗಿ ಬಿಜೆಪಿ ಅಧ್ಯಕ್ಷರ ಆಯ್ಕೆ ಇನ್ನೂ ಬಾಕಿಯಿದೆ ಎಂಬುದಕ್ಕೆ ಪರೋಕ್ಷ ಟೀಕೆ ಮಾಡಿದರು.

ನಾನು ಶಾಖೆಗಳನ್ನು ನಡೆಸುವುದರಲ್ಲಿ ನಿಪುಣ. ಬಿಜೆಪಿಯು ಸರಕಾರ ನಡೆಸುವುದರಲ್ಲಿ ನಿಪುಣ. ನಾವು ಪರಸ್ಪರ ಸಲಹೆಗಳನ್ನು ಮಾತ್ರ ನೀಡಲು ಸಾಧ್ಯ.  ನಾವೇನಾದರೂ ಬಿಜೆಪಿಯ ಅಧ್ಯಕ್ಷರನ್ನು ನಿರ್ಧರಿಸುವಂತಿದ್ದರೆ, ಇಷ್ಟು ದೀರ್ಘ ಸಮಯ ಹಿಡಿಯುತ್ತಿರಲಿಲ್ಲ ಎಂದು ಬಿಜೆಪಿಯ ಅಧ್ಯಕ್ಷರ ಆಯ್ಕೆಯಲ್ಲಿ ಆರೆಸ್ಸೆಸ್ ಪಾತ್ರವೇನಾದರೂ ಇದೆಯೆ ಎಂಬ ಪ್ರಶ್ನೆಗೆ ಮೋಹನ್‌ ಭಾಗವತ್‌ ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News