×
Ad

ಗುಜರಾತ್ | ತೆರವು ಕಾರ್ಯಾಚರಣೆ ವೇಳೆ ಕುಸಿದ ಸೇತುವೆ: ಹಲವರಿಗೆ ಗಾಯ

Update: 2025-07-15 16:31 IST

Screengrab:X/@IndianExpress

ಜುನಾಗಢ : ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ತೆರವು ಕಾರ್ಯಾಚರಣೆ ವೇಳೆ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಹಲವರು ಹೊಳೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಂಗ್ರೋಲ್ ಪಟ್ಟಣದ ಬಳಿ ಶಿಥಿಲಗೊಂಡಿದ್ದ ಸೇತುವೆಯನ್ನು ಅಗೆಯುವ ಯಂತ್ರವನ್ನು ಬಳಸಿ ಕೆಡವುತ್ತಿದ್ದಾಗ ಏಕಾಏಕಿ ಸೇತುವೆ ಕುಸಿದು ಬಿದ್ದ ಪರಿಣಾಮ ಹಲವರು ಹೊಳೆಗೆ ಬಿದ್ದಿದ್ದಾರೆ. ಈ ಕುರಿತ ವೀಡಿಯೊ ವೈರಲ್‌ ಆಗಿದೆ.

ಆಂಟ್ರೋಲಿ ಮತ್ತು ಕೆಶೋಡ್ ಗ್ರಾಮಗಳಿಗೆ ಸಂಪರ್ಕಿಸುವ ಶಿಥಿಲಗೊಂಡ ಸೇತುವೆಯ ಸ್ಲ್ಯಾಬ್ ಅನ್ನು ಕೆಡವುತ್ತಿರುವಾಗ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ ಎಂದು ಜುನಾಗಢ್ ಜಿಲ್ಲಾಧಿಕಾರಿ ಅನಿಲ್ ರಣವಾಸಿಯ ಹೇಳಿದ್ದಾರೆ.

ಜುನಾಗಢ್ ಜಿಲ್ಲೆಯಲ್ಲಿ ಕಳೆದ ಐದರಿಂದ ಆರು ದಿನಗಳಲ್ಲಿ ಪರಿಶೀಲಿಸಲಾದ ಸುಮಾರು 480 ಸೇತುವೆಗಳಲ್ಲಿ ಆರು ಸೇತುವೆಗಳನ್ನು ಅಪಾಯಕಾರಿ ಎಂದು ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಮಾಂಗ್ರೋಲ್ ಪಟ್ಟಣದ ಬಳಿಯ ಸೇತುವೆಯನ್ನು ಕೆಡವಲು ಸೋಮವಾರ ಆದೇಶಿಸಲಾಗಿತ್ತು. ಸೇತುವೆಯನ್ನು ಬಳಸದಂತೆ ಜನರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಹಾಕಲಾಗಿತ್ತು ಎಂದು ಜಿಲ್ಲಾಧಿಕಾರಿ ಅನಿಲ್ ರಣವಾಸಿಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News