ಆರ್ಥಿಕ ಸಾಕ್ಷರತೆ , ನಿವೃತ್ತಿ ಯೋಜನೆ ಉತ್ತೇಜನಕ್ಕೆ PFRDAನಿಂದ ಥೀಮ್ ಅಭಿಯಾನ
Photo Credit : pfrda.org.in
ಹೊಸದಿಲ್ಲಿ,ನ.26: ನಿವೃತ್ತಿ ಯೋಜನೆ, ಆರ್ಥಿಕ ಸ್ವಾವಲಂಬನೆಯ ಮಹತ್ವ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಬಗ್ಗೆ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಅರಿವನ್ನು ಮೂಡಿಸಲು ಪಿಂಚಣಿ ನಿಧಿ ನಿಯಂತ್ರಕ ಹಾಗೂ ಅಭಿವೃದ್ಧಿ ಪ್ರಾಧಿಕಾರವು ‘NPS ಕ್ವೆಸ್ಟ್-ಚೇಸ್ ಯೂವರ್ ಫ್ಯೂಚರ್’ ಅಭಿಯಾನವನ್ನು ಹಮ್ಮಿಕೊಂಡಿದೆ.
`#NPS ಝರೂರಿ ಹೈ’ ಥೀಮ್ ನಡಿ ರೀಲ್ಸ್, ಪೋಸ್ಟರ್‌ಗಳು, AI ವಿಡಿಯೋಗಳ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಈ ಉಪಕ್ರಮವು ನಾಗರಿಕರನ್ನು ಉತ್ತೇಜಿಸಲಿದೆ.
ಥೀಮ್‌ಗಳು: 1.ಪ್ರತಿ ಉದ್ಯೋಗ, ಒಂದು ಪಿಂಚಣಿ 2.ಬೇಗನೇ ಆರಂಭಿಸಿ: ಸಂಯೋಜನೆಯ ಶಕ್ತಿ- ನಿಮ್ಮ ನಿವೃತ್ತಿಯನ್ನು ಸುಭದ್ರಗೊಳಿಸಿ. 3. ನಿವೃತ್ತಿ ಯೋಜನೆ, ಘನತೆ ಹಾಗೂ ಆರ್ಥಿಕ ಸ್ವಾವಲಂಬನೆ 4. ಆರ್ಥಿಕ ಸಾಕ್ಷರತೆ-NPS ವಾತ್ಸಲ್ಯ.
ಎಲ್ಲಾ ಪ್ರವೇಶಗಳೂ ಅಧಿಕೃತ ಟ್ಯಾಗ್‌ಲೈನ್ ‘‘#NPS ಝರೂರಿ ಹೈ’’ಅನ್ನು ಮೂದಿಸಿರಬೇಕು ಹಾಗೂ ಹಣಕಾಸು ಯೋಜನೆಯ ಮಹತ್ವದ ಬಗ್ಗೆ ಬೆಳಕುಚೆಲ್ಲಬೇಕು.
ಅತ್ಯುತ್ತಮ ಇನ್‌ಫ್ಲುಯೆನ್ಸರ್ ರೀಲ್, ಅತ್ಯುತ್ತಮ AIವೀಡಿಯೊ, ಅತ್ಯುತ್ತಮ ಸೃಜನಶೀಲ ಪೋಸ್ಟರ್, ಗ್ರಾಫಿಕ್ ಅಥವಾ ಆರ್ಟ್‌ವರ್ಕ್‌ಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಭಾರತೀಯ ಪೌರರು ಹಾಗೂ ಕಂಪೆನಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಸಂಸ್ಥೆಯ ಅಧಿಕೃತ ಅಭಿಯಾನದ ಜಾಹೀರಾತುಗಳಲ್ಲಿ ಲಭ್ಯವಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಇಲ್ಲವೇ PFRDAದ ಅಧಿಕೃತ ವೆಬ್‌ಸೈಟ್ .