×
Ad

ಭೂತಾನ್ ದೊರೆಯ ಜನ್ಮದಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಭೂತಾನ್ ಗೆ ತೆರಳಿದ ಪ್ರಧಾನಿ ಮೋದಿ

Update: 2025-11-11 12:14 IST

Photo: X/@narendramodi

ಹೊಸದಿಲ್ಲಿ: ಭೂತಾನ್ ನ ನಾಲ್ಕನೆಯ ದೊರೆ ಜಿಗ್ಮೆ ಸಿಂಗೈ ವಾಂಗ್ ಚುಕ್ ವರ 70ನೇ ಜನ್ಮದಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೂತಾನ್ ರಾಜಧಾನಿ ತಿಂಪುಗೆ ತೆರಳಿದರು.

ಎರಡು ದಿನಗಳ ಈ ಪ್ರವಾಸದಲ್ಲಿ ಭೂತಾನ್ ದೊರೆ ಜುಗ್ಮೆ ಕೇಶರ್ ನಂಗ್ಯಾಲ್ ವಾಂಗ್ ಚುಕ್, ಅವರ ತಂದೆ ಮತ್ತು ಪೂರ್ವಾಧಿಕಾರಿ ಸಿಂಗೈ ಹಾಗೂ ಪ್ರಧಾನ ಮಂತ್ರಿ ಶೇರಿಂಗ್ ತೋಬ್ಗೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ.

“ನನ್ನ ಈ ಭೇಟಿ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಬಲಗೊಳಿಸಲಿದೆ ಹಾಗೂ ಪ್ರಗತಿ ಮತ್ತು ಅಭ್ಯುದಯೆಡೆಗಿನ ನಮ್ಮ ಜಂಟಿ ಪ್ರಯತ್ನವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದು ನಾನು ನಂಬಿದ್ದೇನೆ” ಎಂದು ಭೂತಾನ್ ಗೆ ಪ್ರಯಾಣಿಸುವುದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

“ನಾಲ್ಕನೇ ದೊರೆಯ 70ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಜನರೊಂದಿಗೆ ಪಾಲ್ಗೊಳ್ಳುವುದು ಗೌರವದ ಸಂಗತಿ” ಎಂದೂ ಅವರು ಹೇಳಿದ್ದಾರೆ.

ಈ ಭೇಟಿಯ ವೇಳೆ ಪುನತಾಂಗ್ಚು-II ಜಲವಿದ್ಯುತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಈ ಕುರಿತೂ ಎಕ್ಸ್ ನಲ್ಲಿ ಉಲ್ಲೇಖಿಸಿರುವ ಅವರು, “ಪುನತಾಂಗ್ಚು-II ಜಲವಿದ್ಯುತ್ ಯೋಜನೆ ಉದ್ಘಾಟನೆಗೊಳ್ಳುವ ಮೂಲಕ, ಈ ಭೇಟಿ ನಮ್ಮ ಇಂಧನ ಪಾಲುದಾರಿಕೆಯಲ್ಲಿನ ಮುಖ್ಯು ಮೈಲಿಗಲ್ಲಿಗೂ ಸಾಕ್ಷಿಯಾಗಲಿದೆ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News