×
Ad

ಪೋಪ್ ಫ್ರಾನ್ಸಿಸ್ ಅಗಲಿಕೆ ತೀವ್ರ ದುಃಖ ತಂದಿದೆ: ಪ್ರಧಾನಿ ಮೋದಿ ಸಂತಾಪ

Update: 2025-04-21 16:07 IST

Photo credit: ANI

ಹೊಸದಿಲ್ಲಿ: ಪೋಪ್ ಫ್ರಾನ್ಸಿಸ್ ಅವರ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಪೋಪ್ ಫ್ರಾನ್ಸಿಸ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪವನ್ನು ಸೂಚಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಪ್ ಫ್ರಾನ್ಸಿಸ್ ಅವರ ಅಗಲಿಕೆ ತೀವ್ರ ದುಃಖ ತಂದಿದೆ. ಈ ದುಃಖದ ಸಂದರ್ಭದಲ್ಲಿ ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸಹಾನುಭೂತಿ, ನಮ್ರತೆ ಮತ್ತು ಆಧ್ಯಾತ್ಮಿಕ ದಾರಿದೀಪವಾಗಿ ಪೋಪ್ ಫ್ರಾನ್ಸಿಸ್ ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಅವರು ಕ್ರಿಸ್ತರ ಆದರ್ಶಗಳನ್ನು ಅರಿತುಕೊಂಡರು. ಅವರು ಶ್ರದ್ಧೆಯಿಂದ ಬಡವರ ಸೇವೆ ಮಾಡಿದರು. ನೊಂದವರಿಗೆ ಭರವಸೆಯ ಚೇತನವಾದರು ಎಂದು ಪ್ರಧಾನಿ ಹೇಳಿದ್ದಾರೆ.

ನಾನು ಅವರನ್ನು ಭೇಟಿ ಮಾಡಿದ ಕ್ಷಣವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದೇನೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯವನ್ನು ಯಾವಾಗಲೂ ಗೌರವಿಸಲಾಗುತ್ತದೆ. ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲಿ ಎಂದು ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News