×
Ad

ಪ್ರಧಾನಿ ನರೇಂದ್ರ ಮೋದಿಗೆ ಘಾನಾಧ ಅತ್ಯುನ್ನತ ನಾಗರಿಕ ಗೌರವ ಪ್ರದಾನ

Update: 2025-07-03 12:04 IST

Photo credit: X/@narendramodi

ಅಕ್ರಾ: ಘಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಘಾನಾ ಅಧ್ಯಕ್ಷ ಜಾನ್ ಮಹಾಮ ಅವರು ಬುಧವಾರ ಘಾನಾದ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ದಿ ಘಾನಾ’ ಅನ್ನು ಪ್ರದಾನ ಮಾಡಿದರು.

ಗೌರವ ಸ್ವೀಕರಿಸಿದ ನಂತರ ಘಾನಾ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ, “ಇದು ಅಪಾರ ಹೆಮ್ಮೆಯ ವಿಷಯ” ಎಂದು ಹರ್ಷ ವ್ಯಕ್ತಪಡಿಸಿದರು.

“ಘಾನಾದ ಅತ್ಯುನ್ನತ ನಾಗರಿಕ ಗೌರವವನ್ನು ಸ್ವೀಕರಿಸಿರುವುದು ನನ್ನ ಪಾಲಿಗೆ ಅಪಾರ ಹೆಮ್ಮೆಯ ಸಂಗತಿ ಮತ್ತು ಗೌರವವಾಗಿದೆ. ಇದಕ್ಕಾಗಿ ಘಾನಾ ಅಧ್ಯಕ್ಷ ಮಹಾಮ, ಘಾನಾ ಸರಕಾರ ಹಾಗೂ ಘಾನಾದ ಜನತೆಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ” ಎಂದು ಅವರು ಧನ್ಯವಾದ ಸಲ್ಲಿಸಿದರು.

ಈ ಗೌರವವನ್ನು ಎರಡೂ ದೇಶಗಳ ಯುವಜನತೆಗೆ ಅರ್ಪಿಸುವುದಾಗಿಯೂ ಅವರು ಘೋಷಿಸಿದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನಾನು ಈ ಗೌರವವನ್ನು ನಮ್ಮ ಯುವಜನತೆಯ ಮಹಾತ್ವಾಕಾಂಕ್ಷೆಗಳು, ಅವರ ಉಜ್ವಲ ಭವಿಷ್ಯ, ನಮ್ಮ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಂಪ್ರದಾಯಗಳು ಹಾಗೂ ಭಾರತ ಮತ್ತು ಘಾನಾ ನಡುವಿನ ಐತಿಹಾಸಿಕ ಬಾಂಧವ್ಯಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.

ಘಾನಾ ಭೇಟಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಗೆ ಈ ಗೌರವ ಪ್ರದಾನ ಮಾಡಲಾಗಿದ್ದು, ಕಳೆದ 30 ವರ್ಷಗಳಿಗೂ ಹೆಚ್ಚು ಅವಧಿಯ ನಂತರ, ಭಾರತದ ಪ್ರಧಾನಿಯೊಬ್ಬರಿಗೆ ಪ್ರದಾನ ಮಾಡಲಾಗಿರುವ ಘಾನಾದ ಮೊಟ್ಟಮೊದಲ ನಾಗರಿಕ ಗೌರವ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News