×
Ad

ರಾಹುಲ್ ಗಾಂಧಿಯಿಂದ ನಾಲ್ಕು ದಕ್ಷಿಣ ಅಮೆರಿಕ ದೇಶಗಳ ಪ್ರವಾಸ

Update: 2025-09-27 13:06 IST

ರಾಹುಲ್ ಗಾಂಧಿ (File Photo: PTI)

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಲ್ಕು ದಕ್ಷಿಣ ಅಮೆರಿಕ ದೇಶಗಳ ಭೇಟಿಗೆ ತೆರಳುತ್ತಿದ್ದು,ಅಲ್ಲಿ ಅವರು ರಾಜಕೀಯ ನಾಯಕರು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆ ಇದೆ.

ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಉಸ್ತುವಾರಿ ಪವನ್ ಖೇರಾ ಈ ಮಾಹಿತಿಯನ್ನು ನೀಡಿದ್ದು, ರಾಹುಲ್ ಗಾಂಧಿ ಎಷ್ಟು ದಿನಗಳ ಕಾಲ ದೇಶದಿಂದ ಹೊರಗೆ ತೆರಳಲಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪವನ್ ಖೇರಾ, “ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ದಕ್ಷಿಣ ಅಮೆರಿಕಾ ಭೇಟಿಗೆ ತೆರಳಲಿದ್ದಾರೆ. ಅಲ್ಲಿ ಅವರು ನಾಲ್ಕು ದೇಶಗಳ ರಾಜಕೀಯ ನಾಯಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉದ್ಯಮ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಕಾರ, ರಾಹುಲ್ ಗಾಂಧಿ ಬ್ರೆಝಿಲ್ ಹಾಗೂ ಕೊಲೊಂಬಿಯಾಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News