×
Ad

ಜಿಎಸ್‌ಟಿ ಕಡಿತದ ಬಳಿಕ ‘ರೈಲ್ ನೀರ್’ ಬೆಲೆ ಇಳಿಕೆ ಮಾಡಿದ ಭಾರತೀಯ ರೈಲ್ವೆ

Update: 2025-09-21 19:51 IST

ಹೊಸದಿಲ್ಲಿ, ಸೆ. 21: ರೈಲು ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಬಂದಿದೆ. ಕೇಂದ್ರ ಸರಕಾರ ಇತ್ತೀಚೆಗೆ ಜಿಎಸ್‌ಟಿ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ‘ರೈಲ್ ನೀರ್’ ಬಾಟಲಿ ನೀರಿನ ದರವನ್ನು ಕಡಿತಗೊಳಿಸಲಿದೆ.

ಭಾರತೀಯ ರೈಲ್ವೆ ತನ್ನ ಜನಪ್ರಿಯ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಬ್ರಾಂಡ್‌ನ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಯನ್ನು ಇಳಿಕೆ ಮಾಡಲು ನಿರ್ಧರಿಸಿದೆ.

ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಬಾಟಲಿ ‘ರೈಲ್ ನೀರ್’ನ ಗರಿಷ್ಠ ಚಿಲ್ಲರೆ ಬೆಲೆಯನ್ನು 1 ಲೀಟರ್ ಬಾಟಲಿಗೆ 15 ರೂ. ನಿಂದ 14 ರೂ.ಗೆ ಹಾಗೂ 500 ಎಂಎಲ್ ಬಾಟಲಿ ಬೆಲೆಯನ್ನು 10 ರೂ.ನಿಂದ 9ರೂ.ಗೆ ಪರಿಷ್ಕೃರಿಸಲಾಗುವುದು ಎಂದು ಐಆರ್‌ಟಿಸಿಯ ಎಲ್ಲಾ ಜನರಲ್ ಮ್ಯಾನೇಜರ್ ಹಾಗೂ ಸಿಎಂಡಿಗಳಿಗೆ 2025 ಸೆಪ್ಟಂಬರ್ 20ರ ಪತ್ರದಲ್ಲಿ ರೈಲ್ವೆ ಮಂಡಳಿ ತಿಳಿಸಿದೆ.

ಈ ಬದಲಾವಣೆ ‘ರೈಲ್ ನೀರ್’ಗೆ ಮಾತ್ರ ಸೀಮಿತವಾಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ‘‘ರೈಲ್ವೆ ಆವರಣ/ರೈಲುಗಳಲ್ಲಿ ಮಾರಾಟವಾಗುವ ಐಆರ್‌ಟಿಸಿ/ರೈಲ್ವೆ ಶಾರ್ಟ್ಲಿಸ್ಟ್ ಮಾಡಿದ ಇತರ ಬ್ರಾಂಡ್‌ಗಳ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಬಾಟಲಿಗಳ ಗರಿಷ್ಠ ಚಿಲ್ಲರೆ ಬೆಲೆಯನ್ನೂ ಕೂಡ 1 ಲೀಟರ್‌ನ ಬಾಟಲಿಗೆ 15 ರೂ.ನಿಂದ 14 ರೂ.ಗೆ ಹಾಗೂ 500 ಎಂಎಲ್ ಸಾಮರ್ಥ್ಯದ ಬಾಟಲಿಗೆ 10 ರೂ.ನಿಂದ 9 ರೂ.ಗೆ ಪರಿಷ್ಕರಿಸಲಾಗುತ್ತದೆ’’ ಎಂದು ಪತ್ರ ಹೇಳಿದೆ.

ಜಿಎಸ್‌ಟಿ ಕಡಿತದ ನೇರ ಪ್ರಯೋಜನವನ್ನು ಪ್ರಯಾಣಿಕರು ಪಡೆಯಲು ಈ ಬೆಲೆ ಕಡಿತ 2025 ಸೆಪ್ಟಂಬರ್ 22ರಿಂದ ಜಾರಿಗೆ ಬರಲಿದೆ. ತೆರಿಗೆ ವಿನಾಯತಿಯನ್ನು ವಿಳಂಬ ಮಾಡದೆ ಗ್ರಾಹಕರಿಗೆ ವರ್ಗಾಯಿಸುವ ಭಾರತೀಯ ರೈಲ್ವೆಯ ಪ್ರಯತ್ನ ಈ ನಿರ್ಧಾರದಲ್ಲಿ ಪ್ರತಿಬಿಂಬಿಸುತ್ತದೆ.

ಐಆರ್‌ಟಿಸಿ 2003ರಲ್ಲಿ ಆರಂಭಿಸಿದ ‘ರೈಲ್ ನೀರ್’ ಕೇವಲ ಬಾಟಲಿ ನೀರಿನ ಬ್ರಾಂಡ್ ಮಾತ್ರ ಅಲ್ಲ. ಅದು ಪ್ರಯಾಣಿಕರ ಸೌಲಭ್ಯವನ್ನು ಹೆಚ್ಚಿಸಲು ಹಾಗೂ ರೈಲಿನಲ್ಲಿ ಸುರಕ್ಷಿತ ಕುಡಿಯುವ ನೀರಿನ ಪೂರೈಕೆಯ ಖಾತರಿ ನೀಡಲು ರೂಪಿಸಲಾದ ಪ್ರಮುಖ ಉತ್ಪನ್ನವಾಗಿದೆ. ಮೊಟ್ಟ ಮೊದಲು ಪಶ್ಚಿಮಬಂಗಾಳದ ನಾಂಗ್ಲೋಯಿಯಲ್ಲಿ ‘ರೈಲ್ ನೀರ್’ ಘಟಕವನ್ನು ಸ್ಥಾಪಿಸಲಾಗಿತ್ತು. ಹೊಸದಿಲ್ಲಿ ಹಾಗೂ ನಿಝಾಮುದ್ದೀನ್‌ನಿಂದ ಆರಂಭವಾಗುವ ರಾಜಧಾನಿ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈ ಘಟಕ ಆರಂಭಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News