×
Ad

ಪ್ರೇಮ ಪ್ರಸ್ತಾವಕ್ಕೆ ತಿರಸ್ಕಾರ ; ದಲಿತ ಯುವತಿಯ ಕತ್ತು ಸೀಳಿ ಕೊಂದ ಮೇಲ್ಜಾತಿಯ ಯುವಕ

Update: 2023-10-02 23:26 IST

ಸಾಂದರ್ಭಿಕ ಚಿತ್ರ

ತಿರುನೆಲ್ವೆಲಿ : ಇಲ್ಲಿಯ ನೆಲ್ಲೈಯಪ್ಪಾರ್ ದೇವಸ್ಥಾನದ ಬಳಿಯ ಗೋದಾಮೊಂದರಲ್ಲಿ ಮೇಲ್ಜಾತಿಯ ಹಿಂದು ಯುವಕನೋರ್ವ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಇಲ್ಲಿಗೆ ಸಮೀಪದ ತಿರುಪ್ಪನಿಕರಿಸಲ್ಕುಲಂ ನಿವಾಸಿ ಸಂಧ್ಯಾ (೧೮) ಕೊಲೆಯಾದ ಯುವತಿ.

ಬಲ್ಲ ಮೂಲಗಳು ತಿಳಿಸಿರುವಂತೆ ಸಂಧ್ಯಾ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಸ್ಟೋರ್ ಬಳಿಯ ಗೋಲ್ಡ್ ಕವರಿಂಗ್ ಆಭರಣಗಳ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ರಾಜೇಶ ಕಣ್ಣಾ ಆರು ತಿಂಗಳ ಹಿಂದೆ ಆಕೆಯೊಂದಿಗೆ ಗೆಳೆತನ ಬೆಳೆಸಿದ್ದ. ಆತ ಪ್ರೇಮ ಪ್ರಸ್ತಾವವನ್ನು ಮುಂದಿರಿಸಿದ್ದಾಗ ಸಂಧ್ಯಾ ಅದನ್ನು ತಿರಸ್ಕರಿಸಿದ್ದಳು. ಆದಾಗ್ಯೂ ಕಣ್ಣಾ ಆಕೆಯ ಬೆನ್ನು ಬಿಟ್ಟಿರಲಿಲ್ಲ ಮತ್ತು ತಾನು ಕೆಲಸವನ್ನು ಬಿಟ್ಟಿದ್ದರೂ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದ.

ಕಣ್ಣಾ ಎರಡು ದಿನಗಳ ಹಿಂದೆ ಸಂಧ್ಯಾಳ ಅಕ್ಕನಿಗೆ ಕರೆ ಮಾಡಿ ಆಕೆಯ ಬಗ್ಗೆ ದೂರಿದ್ದ. ಸೋಮವಾರ ಮಧ್ಯಾಹ್ನ ಸಂಧ್ಯಾ ಕೆಲವು ಸಾಮಗ್ರಿಗಳನ್ನು ತರಲು ಫ್ಯಾನ್ಸಿಸ್ಟೋರ್ ನ ಗೋದಾಮಿಗೆ ತೆರಳಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಣ್ಣಾ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದ. ಸಂಧ್ಯಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟವಿ ದೃಶ್ಯಗಳ ನೆರವಿನಿಂದ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News