×
Ad

ರಕ್ಷಿಸಲಾದ ಕಾರ್ಮಿಕರು ಶೀಘ್ರ ಮನೆಗೆ ವಾಪಸ್ : ಏಮ್ಸ್ ವೈದ್ಯರು

Update: 2023-11-30 22:32 IST

Photo: PTI 

ಹೃಷಿಕೇಶ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲ್ಕ್ಯಾರಾ ಸುರಂಗ ಕುಸಿತ ಅವಘಡದಿಂದ ರಕ್ಷಿಸಲಾಗಿರುವ 41 ಕಾರ್ಮಿಕರನ್ನು ಇಲ್ಲಿಯ ಏಮ್ಸ್ ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು,ಅವರು ಶೀಘ್ರವೇ ಮನೆಗಳಿಗೆ ಮರಳಲಿದ್ದಾರೆ ಎಂದು ವೈದ್ಯರು ತಿಳಿಸಿದರು.

‘ಅವರ ದೇಹಸ್ಥಿತಿ ಸಹಜವಾಗಿಯೇ ಇದೆ, ನಾನು ಅವರನ್ನು ರೋಗಿಗಳು ಎಂದೂ ಕರೆಯುವುದಿಲ್ಲ. ಅವರ ರಕ್ತದೊತ್ತಡ, ಪ್ರಮುಖ ಅಂಗಾಂಗಗಳು, ಆಮ್ಲಜನಕ ಪೂರೈಕೆ ಎಲ್ಲವೂ ಸಾಮಾನ್ಯವಾಗಿವೆ ’ ಎಂದು ಆಸ್ಪತ್ರೆಯ ಸಿಇಒ ಪ್ರೊ.ಮೀನು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಮಿಕರು ಅಸ್ವಸ್ಥಗೊಂಡಿಲ್ಲ, ಅವರನ್ನು ಮನೆಗೆ ಮರಳಿಸುವ ಕುರಿತು ಕೂಡಲೇ ನಿರ್ಧರಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News