×
Ad

ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಲ್ಲಿಕಾರ್ಜುನ ಖರ್ಗೆ

Update: 2024-02-10 17:14 IST

ಮಲ್ಲಿಕಾರ್ಜುನ ಖರ್ಗೆ (PTI)

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಫೇಸ್ಬುಕ್‌ ಲೈವ್‌ ವೇಳೆ ಉದ್ಭವ್‌ ಠಾಕ್ರೆ ಬಣದ ಮುಖಂಡರೊಬ್ಬರ ಪುತ್ರನ ಹತ್ಯೆ ಹಾಗೂ ಪತ್ರಕರ್ತರೊಬ್ಬರ ಕಾರಿನ ಮೇಲಿನ ದಾಳಿ ಪ್ರಕರಣಗಳ ಕುರಿತಂತೆ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಸರ್ಕಾರದ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಹಾಗೂ ಗೂಂಡಾರಾಜ್‌ ತಲೆಯೆತ್ತಿದೆ ಎಂದು ಆರೋಪಿಸಿದ್ದಾರೆ.

“ರಾಜಕಾರಣಿಯೊಬ್ಬರನ್ನು ಫೇಸ್ಬುಕ್‌ ಲೈವ್‌ ವೇಳೆ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ನಿರ್ಭೀತ ಪತ್ರಕರ್ತರೊಬ್ಬರ ಮೇಲೆ ಬಿಜೆಪಿ-ಆರೆಸ್ಸೆಸ್‌ ಗೂಂಡಾಗಳು ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕರೊಬ್ಬರು ಪೊಲೀಸ್‌ ಠಾಣೆಯಲ್ಲಿ ಎಲ್ಲರೆದುರೇ ಇನ್ನೋರ್ವ ರಾಜಕಾರಣಿಗೆ ಗುಂಡಿಕ್ಕಿದ್ದಾರೆ,” ಎಂದು ಖರ್ಗೆ ಹೇಳಿದರು.

“ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಸರಿಯಾಗಿತ್ತು ಹಾಗೂ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿತ್ತು. ಆದರೆ ಜಾರಿ ನಿರ್ದೇಶನಾಲಯದ ಬಲದಿಂದ ರಚಿತವಾದ ಬಿಜೆಪಿ ಸರ್ಕಾರ ಗೂಂಡಾ ರಾಜ್‌ ಹರಡುತ್ತಾ ಜನರ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದೆ,” ಎಂದು ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News