ಸಿಧು ಮೂಸೆವಾಲಾ ಕೊಲೆ ಆರೋಪಿ ಸಚಿನ್ ಅಝರ್ಬೈಜಾನ್ ನಿಂದ ಭಾರತಕ್ಕೆ ಹಸ್ತಾಂತರ
Update: 2023-08-01 12:33 IST
ಹೊಸದಿಲ್ಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಸಚಿನ್ ಬಿಷ್ಣೋಯ್ ನನ್ನು ಅಝರ್ಬೈಜಾನ್ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಸಚಿನ್ ಗ್ಯಾಂಗ್ ಸ್ಟರ್ ಲಾರೆನ್ಸ್ ಯ ಸಂಬಂಧಿ.
ಸಚಿನ್ ನನ್ನು ದೇಶದ ರಾಜಧಾನಿ ಬಾಕುದಿಂದ ಹಸ್ತಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANIಗೆ ದಿಲ್ಲಿ ಪೊಲೀಸ್ ವಿಶೇಷ ಸೆಲ್ ನ ವಿಶೇಷ ಪೊಲೀಸ್ ಆಯುಕ್ತ (ದೆಹಲಿ) ಎಚ್ಜಿಎಸ್ ಧಲಿವಾಲ್ ಹೇಳಿದ್ದಾರೆ.
ಕಳೆದ ವರ್ಷ ಮೇ 29 ರಂದು ಪಂಜಾಬ್ನ ಮಾನ್ಸಾದಲ್ಲಿ 28 ವರ್ಷದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ರಾಜ್ಯ ಸರಕಾರವು ಸಿಧು ಅವರ ಭದ್ರತೆಯನ್ನು ಮೊಟಕುಗೊಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.