×
Ad

ಅತ್ಯಾಧುನಿಕ ‘ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ’ ನಾಳೆ ಮೇ 26ಕ್ಕೆ ದೇಶಕ್ಕೆ ಸಮರ್ಪಣೆ

Update: 2025-05-25 22:55 IST

Photo: PTI

ಹೊಸದಿಲ್ಲಿ: ಅತ್ಯಂತ ನಿಖರವಾದ ಹಾಗೂ ಸ್ಥಳೀಕರಿಸಲಾದ ಹವಾಮಾನ ಮುನ್ಸೂಚನೆಗಳನ್ನು ಒದಗಿಸಲು ಹವಾಮಾನ ಇಲಾಖೆಗೆ ಸಾಧ್ಯವಾಗುವಂತಹ ನೂತನ ‘ಭಾರತ ಮುನ್ಸೂಚನಾ ವ್ಯವಸ್ಥೆ’ಯನ್ನು ಕೇಂದ್ರ ಸರಕಾರವು ಸೋಮವಾರ ಅನಾವರಣಗೊಳಿಸಲಿದೆ.

ಪುಣೆ ಮೂಲದ ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ (ಐಐಟಿಎಂ), ದಿ ಭಾರತ್ ಮುನ್ಸೂಚನಾ ವ್ಯವಸ್ಥೆ (ಬಿಎಫ್‌ಎಸ್) ಸಂಸ್ಥೆ ಇವು 6 ಕಿ.ಮೀ. ಎತ್ತರದ ರೆಸೊಲ್ಯೂಶನ್‌ ನೊಂದಿಗೆ ಹವಾಮಾನ ಮುನ್ಸೂಚನೆಗಳನ್ನು ಒದಗಿಸಲಿದೆ.

ಈ ನೂತನ ಹವಾಮಾನ ಮುನ್ಸೂಚನೆ ಮಾದರಿಯನ್ನು ಪಾರ್ಥಸಾರಥಿ ಮುಖ್ಯೋಪಾಧ್ಯಾಯ ಸೇರಿದಂತೆ ಹಲವಾರು ಪ್ರಮುಖ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಐಐಟಿಎಂ ಕ್ಯಾಂಪಸ್‌ ನಲ್ಲಿ ಕಳೆದ ವರ್ಷ ಸ್ಥಾಪಿಸಲಾದ ನೂತನ ಸೂಪರ್ ಕಂಪ್ಯೂಟರ್ ಅರ್ಕದಿಂದಾಗಿ ಈ ನೂತನ ಹವಾಮಾನ ಮುನ್ಸೂಚನೆ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ ಸೂಪರ್ ಕಂಪ್ಯೂಟರ್ ಪ್ರತ್ಯೂಷ್ ಹವಾಮಾನ ಮುನ್ಸೂಚನೆ ಮಾದರಿಯನ್ನು ಚಲಾಯಿಸಲು 10 ತಾಸುಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ ‘ಅರ್ಕ’ ಕಂಪ್ಯೂಟರ್‌ಗೆ ಕೇವಲ ನಾಲ್ಕು ತಾಸುಗಳು ಸಾಕಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News