ನೀಟ್-ಯುಜಿ 2025ರ ಫಲಿತಾಂಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಒಂದು ಪ್ರಶ್ನೆಯಲ್ಲಿ ತಪ್ಪು ಇದೆ ಎಂದು ಆರೋಪಿಸಿ ನೀಟ್-ಯುಜಿ 2025ರ ಫಲಿತಾಂಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ಆರ್. ಮಹಾದೇವನ್ ಅವರ ಪೀಠ, ಎರಡು ದಿನಗಳ ಹಿಂದೆ ಇದೇ ರೀತಿಯ ಅರ್ಜಿಯನ್ನು ವಜಾಗೊಳಿಸಲಾಗಿದೆ. ವೈಯುಕ್ತಿಕ ಪರೀಕ್ಷಾ ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದಿದೆ.
‘‘ನಾವು ಒಂದೇ ರೀತಿಯ ಪ್ರಕರಣಗಳನ್ನು ವಜಾಗೊಳಿಸಿದ್ದೇವೆ. ಸರಿಯಾದ ಬಹು ಉತ್ತರಗಳು ಇರಬಹುದು ಎಂದು ನಾವು ಒಪ್ಪುತ್ತೇವೆ. ಆದರೆ, ಲಕ್ಷಾಂತರ ವಿದ್ಯಾಥಿಗಳಿಗೆ ನಡೆಸುವ ಪರೀಕ್ಷೆಯಲ್ಲಿ ಹಸ್ತೆಕ್ಷೇಪ ನಡೆಸಲು ಸಾಧ್ಯವಿಲ್ಲ. ಇದು ವೈಯುಕ್ತಿಕ ಪ್ರಕರಣ ಅಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಉಂಟಾಗುತ್ತದೆೆ’’ ಎಂದು ಪೀಠ ಹೇಳಿದೆ.
ತಪ್ಪನ್ನು ಸರಿಪಡಿಸುವಂತೆ ಹಾಗೂ ಫಲಿತಾಂಶವನ್ನು ಪರಿಷ್ಕರಿಸುವಂತೆ ಕೋರಿ ಅಭ್ಯರ್ಥಿಯೋರ್ವ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಅಲ್ಲದೆ, ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ನೀಡುವಂತೆ ಕೂಡ ಅರ್ಜಿ ಕೋರಿತ್ತು.