×
Ad

ಬದಲಿ ಆಟಗಾರನ ಹೆಸರನ್ನು ಮರೆತ ಸೂರ್ಯಕುಮಾರ್!

Update: 2025-09-19 21:46 IST

ಸೂರ್ಯಕುಮಾರ್ ಯಾದವ್ |PTI

ದುಬೈ, ಸೆ.19: ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಶುಕ್ರವಾರ ಒಮಾನ್ ವಿರುದ್ಧ ನಡೆದ ಏಶ್ಯ ಕಪ್‌ನ ಗ್ರೂಪ್ ಹಂತದ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಬದಲಿ ಆಟಗಾರನ ಹೆಸರನ್ನು ಮರೆತು ಪೇಚಿಗೆ ಸಿಲುಕಿದರು.

ಆಡುವ 11ರ ಬಳಗದಲ್ಲಿನ ಬದಲಾವಣೆಯ ಕುರಿತು ಮಾತನಾಡಿದ ಸೂರ್ಯ, ಹರ್ಷಿತ್ ರಾಣಾ ಅವರು ವರುಣ್ ಚಕ್ರವರ್ತಿ ಬದಲಿಗೆ ಆಡಲಿದ್ದಾರೆ ಎಂದರು. ಆದರೆ 2ನೇ ಬದಲಿ ಆಟಗಾರನ ಹೆಸರನ್ನು ಹೇಳಲು ಮರೆತರು.

ಇನ್ನೊಬ್ಬ ಆಟಗಾರನ ಹೆಸರು ಮರೆತುಹೋಯಿತು ಎಂದು ಒಪ್ಪಿಕೊಂಡ ಸೂರ್ಯ ಅವರ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೂರ್ಯಕುಮಾರ್ ಅವರು ಸೀನಿಯರ್ ವೇಗಿ ಜಸ್‌ಪ್ರಿತ್ ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ ಆಡುತ್ತಾರೆಂದು ಹೇಳಲು ಪರದಾಡಿದರು. ಭಾರತ ತಂಡವು ತನ್ನ ಮೊದಲೆರಡು ಪಂದ್ಯಗಳ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News