ತಾಂತ್ರಿಕ ದೋಷ: ಹಾರಾಟಕ್ಕೆ ಸಿದ್ಧವಾಗಿದ್ದ ಇಂಡಿಗೊ ವಿಮಾನ ಸಂಚಾರ ಸ್ಥಗಿತ
Update: 2025-09-14 23:07 IST
ಇಂಡಿಗೊ ವಿಮಾನ | PC : PTI
ಹೊಸದಿಲ್ಲಿ, ಸೆ. 14: ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಸೇರಿದಂತೆ 150ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ದಿಲ್ಲಿಗೆ ತೆರಳಲಿದ್ದ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ನೋ ವಿಮಾನ ನಿಲ್ದಾಣದಿಂದ ಅದರ ಹಾರಾಟವನ್ನು ಶನಿವಾರ ಸ್ಥಗಿತಗೊಳಿಸಲಾಯಿತು.
ವಿಮಾನದ ಸಿಬ್ಬಂದಿ ದೋಷವನ್ನು ಗಮನಿಸಿದ ಸಂದರ್ಭ ಈ ವಿಮಾನ ರನ್ ವೇಯಲ್ಲಿ ಇತ್ತು. ಕೂಡಲೇ ಹಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.