×
Ad

ತೇಜಸ್ ವಿಮಾನ ಪತನ ಅಪರೂಪದ ಘಟನೆ: HAL

Update: 2025-11-24 21:24 IST

Screengrab : X

ಹೊಸದಿಲ್ಲಿ, ನ. 24: ಇತ್ತೀಚೆಗೆ ದುಬೈಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ತೇಜಸ್ ಯುದ್ಧವಿಮಾನ ಪತನಗೊಂಡಿರುವುದು ಒಂದು ಅಪರೂಪದ ಘಟನೆಯಾಗಿದೆ ಎಂದು ಯುದ್ಧವಿಮಾನದ ಉತ್ಪಾದನಾ ಕಂಪೆನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸೋಮವಾರ ಹೇಳಿದೆ.

‘‘ಊಹಿಸಲಾಗದ ಸನ್ನಿವೇಶಗಳಿಂದಾಗಿ ವಿಮಾನ ಪತನಗೊಂಡಿದೆ ಎಂಬುದಾಗಿ ‘ರಾಯ್ಟರ್ಸ್’ ವರದಿಯೊಂದು ತಿಳಿಸಿದೆ ಎಂದು HAL ಹೇಳಿತು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿತು.

ಈ ಪತನವು ತನ್ನ ವ್ಯವಹಾರ ಅಥವಾ ಭವಿಷ್ಯದ ವಿತರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ತಾನು ಭಾವಿಸುವುದಿಲ್ಲ ಎಂದು HAL ಹೇಳಿತು. ಯುದ್ಧವಿಮಾನ ಅಪಘಾತ ಕುರಿತ ತನಿಖೆಗೆ ಸಹಕಾರ ನೀಡುವುದಾಗಿ ಅದು ಹೇಳಿತು.

ಶುಕ್ರವಾರ ದುಬೈ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಭಾರತದ ತೇಜಸ್ ಯುದ್ಧವಿಮಾನವು ನೆಲಕ್ಕೆ ಅಪ್ಪಳಿಸಿ ಬೆಂಕಿಯುಂಡೆಯಾಗಿ ಪರಿವರ್ತನೆಗೊಂಡಿತು. ಈ ದುರಂತದಲ್ಲಿ, ವಿಮಾನದಲ್ಲಿದ್ದ ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಮೃತಪಟ್ಟಿದ್ದಾರೆ. ಪ್ರಖರ ಚಲನೆ ಮತ್ತು ಸಾಹಸಿಕ ಹಾರಾಟಕ್ಕೆ ಹೆಸರಾಗಿರುವ 37 ವರ್ಷದ ಪೈಲಟ್ ತಗ್ಗಿನಲ್ಲಿ ಕಸರತ್ತು ನಡೆಸುತ್ತಿದ್ದಾಗ ದುರಂತ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News