×
Ad

ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ದರವೆಷ್ಟು?

Update: 2026-01-17 11:38 IST

ಸಾಂದರ್ಭಿಕ ಚಿತ್ರ 

ತಜ್ಞರ ಪ್ರಕಾರ ಮುಂಬರುವ ಮದುವೆ ಸೀಸನ್‌ನಲ್ಲಿ ಮತ್ತೆ ಚಿನ್ನ ಏರು ಹಾದಿಯಲ್ಲಿ ಸಾಗಲಿದೆ. ಅಗತ್ಯವಿರುವವರು ಬೆಲೆ ಸ್ಥಿರವಾಗಿರುವಾಗಲೇ ಖರೀದಿಸುವುದು ಉತ್ತಮ.

ಕಳೆದ ಎರಡು ದಿನಗಳಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಸ್ವಲ್ಪ ಏರಿಕೆ ಕಂಡಿದೆ. ಮದುವೆ ಸೀಸನ್‌ಗೆ ಖರೀದಿಸುವವರಿಗೆ ಬೆಲೆ ಸ್ಥಿರವಾಗಿರುವಾಗ ಖರೀದಿಸುವುದು ಉತ್ತಮ. ತಜ್ಞರ ಪ್ರಕಾರ ಮುಂಬರುವ ಮದುವೆ ಸೀಸನ್‌ನಲ್ಲಿ ಮತ್ತೆ ಚಿನ್ನ ಏರು ಹಾದಿಯಲ್ಲಿ ಸಾಗಲಿದೆ.

ಜಾಗತಿಕ ಆರ್ಥಿಕ ವ್ಯವಸ್ಥೆ ಅಸ್ಥಿರತೆಯ ಹಂತದಲ್ಲಿರುವ ಈ ಕಾಲಘಟ್ಟದಲ್ಲಿ ಚಿನ್ನ ಮತ್ತೆ ವಿಶ್ವದ ಗಮನ ಸೆಳೆಯುತ್ತಿದೆ. ಯುದ್ಧಗಳು, ಭೌಗೋಳಿಕ ರಾಜಕೀಯ ಉದ್ವಿಘ್ನತೆ, ಹಣದುಬ್ಬರ ಮತ್ತು ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳಲ್ಲಿ ದೇಶಗಳು ಚಿನ್ನದ ಮೇಲೆ ಹೂಡಿಕೆ ಮಾಡುತ್ತದೆ. 2010ರ ನಂತರ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಮೇಲೆ ಹೆಚ್ಚಯ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ದರ ಏರಿಕೆಯಾಗುತ್ತಲೇ ಬಂದಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಶನಿವಾರ ಜನವರಿ 17ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,378 (+38) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,180 (+35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,784 (+29) ರೂ. ಬೆಲೆಗೆ ತಲುಪಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?

2026 ಜನವರಿ 17 ಶನಿವಾರ 24 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 14,378 ರೂ. ಆಗಿದೆ. ಶುಕ್ರವಾರ ಶುದ್ಧ ಚಿನ್ನದ ದರ 14,340 ರೂ. ಇತ್ತು. ಅಂದರೆ, 38 ರೂ. ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ 22 ಕ್ಯಾರೆಟ್‌ನ 1ಗ್ರಾಂ ಚಿನ್ನದ ಬೆಲೆಯು 13,145 ರೂ. ಆಗಿದೆ. ಶುಕ್ರವಾರ 13,180 ರೂ. ಇತ್ತು. ಅಂದರೆ, 35 ರೂ. ಏರಿಕೆ ಕಂಡಿದೆ. 18 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 10,784 ರೂ. ಆಗಿದೆ. ಶುಕ್ರವಾರ ಈ ದರ 10,755 ರೂ. ಇತ್ತು. ಅಂದರೆ 29 ರೂ. ಏರಿಕೆ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News