×
Ad

ಉತ್ತರ ಪ್ರದೇಶ: 24 ಕೋ.ರೂ. ಮೌಲ್ಯದ ಗಾಂಜಾ ವಶ; ಇಬ್ಬರ ಬಂಧನ

Update: 2025-08-29 21:34 IST

ಸಾಂದರ್ಭಿಕ ಚಿತ್ರ

ಲಕ್ನೊ, ಆ. 29: ಇಲ್ಲಿನ ಚೌಧರಿ ಚರಣ್ ಸಿಂಗ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 24 ಕೋ.ರೂ. ಮೌಲ್ಯದ ಹ್ರೈಡ್ರೋಫೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಕಂದಾಯ ಬೇಹುಗಾರಿಕೆಯ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಆಗಸ್ಟ್ 26ರಂದು ಏರ್ ಇಂಡಿಯಾ ವಿಮಾನದ ಮೂಲಕ ಬ್ಯಾಂಕಾಕ್‌ ನಿಂದ ಇಲ್ಲಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡರು.

‘‘ವಿಚಾರಣೆ ಸಂದರ್ಭ ಈ ಇಬ್ಬರು ಪ್ರಯಾಣಿಕರು, ತಮ್ಮ ಬ್ಯಾಗ್‌ಗಳಲ್ಲಿ ಹೈಡ್ರೋಫೋನಿಕ್ ಗಾಂಜಾ ಸಾಗಿಸುತ್ತಿರುವುದನ್ನು ಒಪ್ಪಿಕೊಂಡರು’’ ಎಂದು ಡಿಆರ್‌ಐಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಅವರ ಬ್ಯಾಗ್‌ಗಳಲ್ಲಿ ಕೂಲಂಕಷ ತನಿಖೆ ನಡೆಸಿದಾಗ 23.935 ಕಿ.ಗ್ರಾಂ. ಹೈಡ್ರೋಫೋನಿಕ್ ಗಾಂಜಾ ಪತ್ತೆಯಾಯಿತು. ಅದನ್ನು ಎನ್‌ಡಿಎಪಿಎಸ್ ಕಾಯ್ದೆಯ ನಿಯಮಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News