×
Ad

ಉತ್ತರ ಪ್ರದೇಶ: ಶಿಕ್ಷಕಿ ತರಗತಿಯಲ್ಲಿ ನಿದ್ರೆ ಮಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ತರಗತಿಯಲ್ಲಿ ವಿಡಿಯೊ ಚಿತ್ರೀಕರಣಕ್ಕೆ ನಿಷೇಧ

Update: 2024-08-03 16:38 IST

                                                               PC : timesofindia.indiatimes.com

ಆಗ್ರಾ: ಆಲಿಗಢದ ಸರಕಾರಿ ಶಾಲೆಯೊಂದರ ತರಗತಿ ಕೊಠಡಿಯಲ್ಲಿ ಸಣ್ಣ ನಿದ್ರೆಗೆ ಜಾರಿದ್ದ ಶಿಕ್ಷಕಿಯೊಬ್ಬಳ ವಿಡಿಯೊ ವೈರಲ್ ಆಗಿದ್ದು, ಇದರ ಬೆನ್ನಿಗೇ ತರಗತಿ ಕೊಠಡಿಗಳಲ್ಲಿ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ.

ಶುಕ್ರವಾರ ತರಗತಿ ನಡೆಯುತ್ತಿರುವ ವೇಳೆ ಆಲಿಗಢದ ಸರಕಾರಿ ಶಾಲೆಯೊಂದರ ಶಿಕ್ಷಕಿಯೊಬ್ಬರು ನಿದ್ದೆಗೆ ಜಾರಿರುವ ವಿಡಿಯೋ ಒಂದು ವೈರಲ್‌ ಅಗಿದ್ದು, ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಎರಡು ವಿಡಿಯೊಗಳ ಪೈಕಿ ಒಂದು ವಿಡಿಯೊದಲ್ಲಿ, ಶಿಕ್ಷಕಿಯು ಚಾಪೆಯೊಂದರ ಮೇಲೆ ನಿದ್ರೆಗೆ ಜಾರಿರುವುದು ಕಂಡು ಬಂದಿದ್ದರೆ, ಮತ್ತೊಂದು ವಿಡಿಯೊದಲ್ಲಿ ಅವರು ಪದೇ ಪದೇ ವಿದ್ಯಾರ್ಥಿಗಳಿಗೆ ಬೆತ್ತದಿಂದ ಹೊಡೆಯುತ್ತಿರುವುದು ಸೆರೆಯಾಗಿದೆ.

ಇದರ ಬೆನ್ನಿಗೇ ತರಗತಿ ಕೊಠಡಿಗಳಲ್ಲಿ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸಿರುವ ಉತ್ತರ ಪ್ರದೇಶ ಸರಕಾರ, ಘಟನೆಯಲ್ಲಿ ಭಾಗಿಯಾಗಿದ್ದ ಶಿಕ್ಷಕಿ ಡಿಂಪಲ್ ಬನ್ಸಲ್ ರನ್ನು ಅಮಾನತುಗೊಳಿಸಿದ್ದರೆ, ಆ ವಿಡಿಯೊವನ್ನು ಚಿತ್ರೀಕರಿಸಿದ್ದ ಗುತ್ತಿಗೆ ಶಿಕ್ಷಕ ವಿಜಯ್ ಸಿಂಗ್ ರನ್ನು ಸೇವೆಯಿಂದ ವಜಾಗೊಳಿಸಿದೆ.

ತರಗತಿ ಕೊಠಡಿಯಲ್ಲಿ ಅಸ್ವಸ್ಥಗೊಂಡಿರುವವರ ಛಾಯಾಚಿತ್ರ ಅಥವಾ ದೃಶ್ಯಾವಳಿಗಳನ್ನು ರವಾನಿಸಲೇಬೇಕಿದ್ದರೆ, ಅವುಗಳನ್ನು ಸಂಬಂಧಿತ ವಲಯ ಶಿಕ್ಷಣಾಧಿಕಾರಿಕಾರಿ ಅಥವಾ ಪ್ರಾಥಮಿಕ ಶಿಕ್ಷಣಾಧಿಕಾರಿಗೆ ಕಳಿಸಬೇಕೇ ಹೊರತು ದಿನಪತ್ರಿಕೆಗಳಿಗಲ್ಲ” ಎಂದು ಆಲಿಗಢದ ಪ್ರಾಥಮಿಕ ಶಿಕ್ಷಣಾಧಿಕಾರಿ ರಾಕೇಶ್ ಸಿಂಗ್ ಜಿಲ್ಲೆಯಲ್ಲಿರುವ ಸುಮಾರು 2,000 ಸರಕಾರಿ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News