×
Ad

ಉತ್ತರ ಪ್ರದೇಶ | ಮದ್ರಸಾಗಳಿಗೆ ಮಾನ್ಯತೆ ನೀಡಲು ಎರಡು ವಿವಿ ಸ್ಥಾಪನೆಗೆ ಚಿಂತನೆ

Update: 2024-08-11 22:41 IST

ಸಾಂದರ್ಭಿಕ ಚಿತ್ರ

ಲಕ್ನೋ : ಉತ್ತರ ಪ್ರದೇಶ ಸರ್ಕಾರವು ಮದ್ರಸಾಗಳಿಗೆ ಮಾನ್ಯತೆ ನೀಡಲು ಎರಡು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾನ್ಯತೆ ಪಡೆಯದ ಮದ್ರಸಾಗಳಲ್ಲಿನ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರದ ಶಾಲೆಗಳಿಗೆ ಸ್ಥಳಾಂತರಿಸುವ ವಿವಾದದ ಬೆನ್ನಲ್ಲೇ, ರಾಜ್ಯ ಸರ್ಕಾರದ ಈ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌, ‘ಹೊಸದಾಗಿ ಸ್ಥಾಪಿಸುವ ಎರಡು ವಿಶ್ವವಿದ್ಯಾಲಯಗಳೊಂದಿಗೆ ಉತ್ತರ ಪ್ರದೇಶದ ಮದ್ರಸಾ ಶಿಕ್ಷಣ ಮಂಡಳಿಯನ್ನು ಜೋಡಿಸಲಾಗುವುದು. ಈ ವಿವಿಗಳಿಂದ ಎಲ್ಲ ಮದ್ರಸಾಗಳು ಮಾನ್ಯತೆ ಪಡೆಯಬೇಕು ಎಂಬ ಕಾನೂನು ತರಲಾಗುವುದು. ಆ ಮೂಲಕ ಭವಿಷ್ಯದಲ್ಲಿ ಯಾವುದೇ ವಿವಾದಗಳು ಉಂಟಾಗದು’ ಎಂದು ತಿಳಿಸಿದ್ದಾರೆ.

ಪ್ರಸಕ್ತ ರಾಜ್ಯದಲ್ಲಿ ಮದರಾಸಗಳಿಗೆ ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಮಾನ್ಯತೆ ನೀಡುತ್ತಿದೆ.

ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಯಾವುದೇ ಗಡುವನ್ನು ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಂಕಿ ಅಂಶಗಳ ಪ್ರಕಾರ, ಉತ್ತರ ಸುಮಾರು 25,000 ಮದ್ರಸಾಗಳಿವೆ. ಇವುಗಳಲ್ಲಿ 560 ಸರ್ಕಾರಿ ಅನುದಾನಿತ ಮದ್ರಸಾಗಳು ಸೇರಿದಂತೆ ಒಟ್ಟು 16,500 ಮದ್ರಸಾಗಳು ಸರ್ಕಾರದಿಂದ ಮಾನ್ಯತೆ ಪಡೆದಿವೆ. ಸುಮಾರು 8,500 ಮದ್ರಸಾಗಳು ಉತ್ತರ ಪ್ರದೇಶದ ಮದ್ರಸಾ ಶಿಕ್ಷಣ ಮಂಡಳಿಯ ಮಾನ್ಯತೆ ಪಡೆದಿಲ್ಲ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News