×
Ad

ಉತ್ತರಾಖಂಡ: ಫೆ. 5ರಂದು ಸಮಾನ ನಾಗರಿಕ ಸಂಹಿತೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ

Update: 2024-01-26 20:54 IST

ಸಿಂಗ್ ಧಾಮಿ | Photo: PTI 

ಡೆಹ್ರಾಡೂನ್: ಸಮಾನ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ಅಂಗೀಕರಿಸಲು ಉತ್ತರಾಖಂಡ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನವನ್ನು ಫೆಬ್ರವರಿ 5ಕ್ಕೆ ಕರೆಯಲಾಗಿದೆ.

ಸಮಾನ ನಾಗರಿಕ ಸಂಹಿತೆಯ ಬಗ್ಗೆ ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶೆ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯೊಂದನ್ನು ಉತ್ತರಾಖಂಡ ಸರಕಾರವು 2022 ಮೇ ತಿಂಗಳಲ್ಲಿ ರಚಿಸಿತ್ತು. ಅದು ತನ್ನ ವರದಿಯನ್ನು ಸರಕಾರಕ್ಕೆ ಫೆಬ್ರವರಿ 2 ಅಥವಾ 3ಕ್ಕೆ ನೀಡುವ ನಿರೀಕ್ಷೆಯಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಲಿಂಗ ಸಮಾನತೆ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲಿಗಾಗಿ ಈ ವರದಿಯು ಒತ್ತು ನೀಡುತ್ತದೆ ಎನ್ನಲಾಗಿದೆ. ಆದರೆ, ಮಹಿಳೆಯರ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಅಂದು ಹೊಂದಿಲ್ಲ ಎನ್ನಲಾಗಿದೆ.

ಉತ್ತರಾಖಂಡ ವಿಧಾನಸಭೆಯು ಸಮಾನ ನಾಗರಿಕ ಸಂಹಿತೆಯನ್ನು ಅನುಮೋದಿಸಿದ ಬಳಿಕ, ಇತರ ಎರಡು ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಗುಜರಾತ್ ಮತ್ತು ಅಸ್ಸಾಮ್ ಕೂಡ ಬಹುತೇಕ ಇಂಥದೇ ಮಸೂದೆಯೊಂದನ್ನು ತಮ್ಮ ವಿಧಾನಸಭೆಗಳಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News