×
Ad

ಮಸ್ಕತ್ - ಮುಂಬೈ ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2025-07-24 16:26 IST

ಸಾಂದರ್ಭಿಕ ಚಿತ್ರ (PTI)

ಉಡುಪಿ: ಮಸ್ಕತ್‌ನಿಂದ ಮುಂಬೈ ತೆರಳುತ್ತಿದ್ದ ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಉಡುಪಿಯ ತಾಜುದ್ದೀನ್ ಈ ವಿಚಾರವನ್ನು ವಾರ್ತಾಭಾರತಿಗೆ ತಿಳಿಸಿದ್ದಾರೆ. ಮಸ್ಕತ್‌ನಿಂದ ರಾತ್ರಿ 11.40ಗೆ ಹೊರಡಬೇಕಾಗಿದ್ದ ಐಎಕ್ಸ್ 236 ವಿಮಾನ ವಿಳಂಬವಾಗಿ ಮಧ್ಯರಾತ್ರಿ 12.15ಗೆ ಹೊರಟಿತ್ತು. ವಿಮಾನ ಟೇಕ್ ಅಪ್ ಆಗಿ ಅರ್ಧ ಮುಕ್ಕಾಲು ಗಂಟೆಯಲ್ಲಿ ಆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು.

ಈ ವೇಳೆ ವಿಮಾನದ ಸಿಬ್ಬಂದಿಗಳು, ವಿಮಾನದಲ್ಲಿ ಯಾರದಾರೂ ವೈದ್ಯರು, ನರ್ಸ್‌ಗಳಿದ್ದಾರೆಯೇ? ಇದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಎಂದು ಅನೌನ್ಸ್ ಮಾಡಿದರು. ಆದರೆ ಆ ವಿಮಾನದಲ್ಲಿ ವೈದ್ಯರಾಗಲಿ ನರ್ಸ್‌ಗಳಾಗಲಿ ಇರಲಿಲ್ಲ. ಈ ಮಧ್ಯೆ ಆಕೆಗೆ ಹೆರಿಗೆ ನೋವು ವಿಪರೀತವಾಯಿತು. ಕೊನೆಗೆ ಇಬ್ಬರು ಕ್ಯಾಬಿನ್ ಕ್ರೂ ಮತ್ತು ಇಬ್ಬರು ಮಹಿಳೆಯರು ಸೇರಿ ಗರ್ಭಿಣಿಗೆ ಸಲಹೆ ನೀಡಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದರು. ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು.

ಹೆರಿಗೆ ಮಾಡಿಸಿದ ಸಿಬ್ಬಂದಿ ಹಾಗೂ ಮಹಿಳೆಯರಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ತರಬೇತಿ ಸಂದರ್ಭದಲ್ಲಿ ಪಡೆದುಕೊಂಡ ಮಾಹಿತಿಯಂತೆ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದರು. ವಿಮಾನ ಲ್ಯಾಂಡ್ ಆದ ಕೂಡಲೇ ವೈದ್ಯರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ನೀಡಿ ಆಕೆಯನ್ನು ಕರೆದುಕೊಂಡು ಹೋಯಿತು. ಆಕೆ ನನಗೆ ಬ್ಯಾಂಕಾಕ್‌ಗೆ ಹೋಗಬೇಕು ಎಂದು ಹೇಳುತ್ತಿದ್ದರು. ಆದುದರಿಂದ ಆಕೆ ಅಲ್ಲಿಯವರೇ ಆಗಿರಬಹುದು ಎಂದು ತಾಜುದ್ದೀನ್ ಪತ್ರಿಕೆಗೆ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News