×
Ad

ಏರ್ ಇಂಡಿಯಾ ದುರಂತ | ಎರಡು ಕುಟುಂಬ ಸ್ವೀಕರಿಸಿದ ಮೃತದೇಹ ಬೇರೆಯವರದ್ದಾಗಿದೆ : ಮೃತ ಬ್ರಿಟಿಷ್ ಪ್ರಜೆಗಳ ಕುಟುಂಬಸ್ಥರ ಪರ ವಕೀಲರ ಆರೋಪ

Update: 2025-07-23 16:18 IST

Photo credit: PTI

ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದಲ್ಲಿ 53 ಮಂದಿ ಬ್ರಿಟಿಷ್ ಪ್ರಜೆಗಳು ಮೃತಪಟ್ಟಿದ್ದರು. ಅವರಲ್ಲಿ ಕನಿಷ್ಠ ಇಬ್ಬರ ಮೃತದೇಹವನ್ನು ತಪ್ಪಾಗಿ ಗುರುತಿಸಿ ಲಂಡನ್‌ಗೆ ಕಳುಹಿಸಲಾಗಿದೆ ಎಂದು ಸಂತ್ರಸ್ತರ ಕುಟುಂಬದ ಪರ ವಕೀಲರು ಆರೋಪಿಸಿರುವ ಬಗ್ಗೆ indiatoday.in ವರದಿ ಮಾಡಿದೆ.

ಅಹ್ಮದಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಹೊಂದಾಣಿಕೆ ಮಾಡಿದ ನಂತರ ಮೃತರ ಅವಶೇಷಗಳನ್ನು ಮುಚ್ಚಿದ ಶವಪೆಟ್ಟಿಗೆಯಲ್ಲಿ ಲಂಡನ್‌ಗೆ ಕಳುಹಿಸಲಾಗಿತ್ತು.

ಲಂಡನ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಡಿಎನ್ಎಗಳನ್ನು ಹೋಲಿಕೆಗೆ ಪ್ರಯತ್ನಿಸಿದಾಗ ಕನಿಷ್ಠ ಎರಡು ಮೃತದೇಹಗಳನ್ನು ತಪ್ಪಾಗಿ ಕಳುಹಿಸಿರುವುದು ಬಹಿರಂಗವಾಗಿದೆ ಎಂದು ವಕೀಲರು ಹೇಳಿದ್ದಾರೆ.

ವಿಮಾನ ದುರಂತದ ಸಂತ್ರಸ್ತರ ಅವಶೇಷಗಳನ್ನು ತಪ್ಪಾಗಿ ಗುರುತಿಸಿ ಲಂಡನ್‌ಗೆ ಸಾಗಿಸಲಾಗಿದೆ ಎಂದು ಸಂತ್ರಸ್ತರ ಕುಟುಂಬವನ್ನು ಪ್ರತಿನಿಧಿಸುವ ಕೀಸ್ಟೋನ್ ಲಾ ಕಾನೂನು ಸಂಸ್ಥೆಯ ವಕೀಲರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News