×
Ad

'ಸ್ಪೈಡರ್‌ಮ್ಯಾನ್‌' ವೇಷ ಧರಿಸಿ ಅಜಾಗರೂಕವಾಗಿ ಬೈಕ್ ಚಾಲನೆ: ಯುವಕನಿಗೆ 15,000 ರೂ. ದಂಡ!

Update: 2025-08-26 16:06 IST

Photo credit: NDTV

ಭುವನೇಶ್ವರ : ಒಡಿಶಾದ ರೂರ್ಕೆಲಾದ ಜನನಿಬಿಡ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ 'ಸ್ಪೈಡರ್‌ಮ್ಯಾನ್‌' ವೇಷ ಧರಿಸಿ ಅಜಾಗರೂಕ ಸಾಹಸಗಳನ್ನು ಮಾಡಿದ ಯುವಕನೋರ್ವನಿಗೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು 15,000 ರೂ. ದಂಡ ವಿಧಿಸಿದರು.

ಜನನಿಬಿಡ ಸ್ಥಳದಲ್ಲಿ ಯುವಕನೋರ್ವ ಕರ್ಕಶವಾಗಿರುವ ಶಬ್ಧದೊಂದಿಗೆ ಅತಿ ವೇಗವಾಗಿ ಬೈಕ್ ಅನ್ನು ಚಲಾಯಿಸಿಕೊಂಡು ಬಂದಿದಾನೆ. ಅತಿಯಾದ ವೇಗದಿಂದ ಆತ ಬೈಕ್ ಅನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ. ಇದನ್ನು ಗಮನಿಸಿದ ಸಂಚಾರ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿ ಬೈಕ್‌ ಅನ್ನು ವಶಪಡಿಸಿಕೊಂಡಿರುವುದಲ್ಲದೆ 15,000 ರೂ. ದಂಡ ವಿಧಿಸಿದ್ದಾರೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಸ್ಪೈಡರ್ ಮ್ಯಾನ್ ಸ್ಟಂಟ್" ಅನ್ನು ಕೆಲವರು ಅಜಾಗರೂಕ ಮತ್ತು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ಯಾವುದೇ ವೇಷಭೂಷಣ ಧರಿಸಿರಲಿ ಸಂಚಾರ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತವೆ. ರಸ್ತೆಯಲ್ಲಿ ಹೀರೋಯಿಸಂ ತೋರಿಸುವುದರಿಂದ ಇತರರಿಗೂ ಅಪಾಯವನ್ನುಂಟು ಮಾಡುತ್ತದೆ" ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News