×
Ad

ಇನ್ ಸ್ಟಾಗ್ರಾಂ ಸ್ನೇಹಿತನಿಂದ ಯುವತಿಯ ಮೇಲೆ ಅತ್ಯಾಚಾರ

Update: 2023-08-23 10:02 IST

ಗುರುಗಾಂವ್: ಇನ್ ಸ್ಟಾಗ್ರಾಂ ಸ್ನೇಹಿತ ನೊಬ್ಬ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಜತೆಗೆ ಇದನ್ನು ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಸೋನಿಪತ್ ನ  ಮಹಿಳೆಗೆ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವರ್ಷದ ಹಿಂದೆ ಆರೋಪಿ ರಾಹುಲ್ ಎಂಬಾತನ ಪರಿಚಯವಾಗಿತ್ತು. ಪರಸ್ಪರ ದೂರವಾಣಿ ಸಂಖ್ಯೆ ಹಂಚಿಕೊಂಡು ಮಾತುಕತೆ ಆರಂಭಿಸಿದರು. ಗುರುಗಾಂವ್ ನ ಸೆಕ್ಟರ್ 14ರ ಪೇಯಿಂಗ್ ಗೆಸ್ಟ್ ವ್ಯವಸ್ಥೆಯಲ್ಲಿ ವಾಸ ಮಾಡುವಂತೆ ರಾಹುಲ್ ಈಕೆಯ ಮನವೊಲಿಸಿದ್ದ ಎಂದು ಮಹಿಳೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. "ಆಗಸ್ಟ್ 4ರಂದು ರಾಹುಲ್ ನನಗೆ ಕರೆ ಮಾಡಿ ಸೆಕ್ಟರ್ 12ರಲ್ಲಿ ಹೋಟೆಲ್ ಗೆ ಕರೆದೊಯ್ದ. ವಿವಾಹವಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ. ಅಶ್ಲೀಲ ಫೋಟೊಗಳನ್ನು ಕ್ಲಿಕ್ಕಿಸಿದ್ದಲ್ಲದೇ ವಿಡಿಯೊವನ್ನು ಕೂಡಾ ಚಿತ್ರೀಕರಿಸಿಕೊಂಡಿದ್ದಾನೆ. ಇದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ" ಎಂದು ದೂರಿನಲ್ಲಿ ಹೇಳಿದ್ದಾರೆ.

ಭಾರತೀಯ ದಂಡಸಂಹಿತೆ ಸೆಕ್ಷನ್ 376 ಹಾಗೂ 506ರ ಅಡಿಯಲ್ಲಿ ಆರೋಪಿ ವಿರುದ್ಧ ಪಶ್ಚಿಮ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News