×
Ad

ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕ ತಿರುಗೇಟು

Update: 2016-01-04 23:34 IST

ಹಾಶಿಮ್ ಅಮ್ಲ ಶತಕ

ಕೇಪ್‌ಟೌನ್, ಜ.4: ನಾಯಕ ಹಾಶಿಮ್ ಅಮ್ಲ ಶತಕದ(ಅಜೇಯ 157) ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡುವತ್ತ ಹೆಜ್ಜೆ ಇಟ್ಟಿದೆ.

ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಸ್ಕೋರ್ 629 ರನ್‌ಗೆ ಉತ್ತರಿಸಹೊರಟಿರುವ ದಕ್ಷಿಣ ಆಫ್ರಿಕ ತಂಡ 130 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 353 ರನ್ ಗಳಿಸಿದೆ. ಅಮ್ಲ(ಔಟಾಗದೆ 157 ರನ್, 353 ಎಸೆತ, 21 ಬೌಂಡರಿ) ಹಾಗೂ ಎಫ್‌ಡು ಪ್ಲೆಸಿಸ್(ಔಟಾಗದೆ 51, 66 ಎಸೆತ. 6 ಬೌಂಡರಿ) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಫ್ರಿಕ 3ನೆ ಓವರ್‌ನಲ್ಲಿ 7 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗ ವ್ಯಾನ್‌ಝಿಲ್(4) ರನೌಟಾದರು. 2ನೆ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿದ ಎಲ್ಗರ್(44) ಹಾಗೂ ಅಮ್ಲ ತಂಡಕ್ಕೆ ಆಸರೆಯಾದರು. ಎಲ್ಗರ್ ಔಟಾದ ನಂತರ ಜೊತೆಯಾದ ಅಮ್ಲ ಹಾಗೂ ಎಬಿಡಿವಿಲಿಯರ್ಸ್(88 ರನ್, 211 ಎಸೆತ, 12 ಬೌಂಡರಿ, 1 ಸಿಕ್ಸರ್)3ನೆ ವಿಕೆಟ್‌ಗೆ 183 ರನ್ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. 88 ರನ್‌ಗೆ ಸ್ಟೀವ್‌ಫಿನ್‌ಗೆ ವಿಕೆಟ್ ಒಪ್ಪಿಸಿದ ವಿಲಿಯರ್ಸ್ ಶತಕ ವಂಚಿತರಾದರು.

4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 85 ರನ್ ಸೇರಿಸಿದ ಅಮ್ಲ ಹಾಗೂ ಪ್ಲೆಸಿಸ್ ಆಫ್ರಿಕ ತಂಡವನ್ನು ಆಧರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಪ್ರಥಮ ಇನಿಂಗ್ಸ್:

125.5 ಓವರ್‌ಗಳಲ್ಲಿ 629/6 ಡಿಕ್ಲೇರ್

ದ.ಆಫ್ರಿಕ ಪ್ರಥಮ ಇನಿಂಗ್ಸ್:

130 ಓವರ್‌ಗಳಲ್ಲಿ 353/3

 (ಅಮ್ಲ ಔಟಾಗದೆ 157, ಎಬಿಡಿವಿಲಿಯರ್ಸ್ 88, ಪ್ಲೆಸಿಸ್ ಔಟಾಗದೆ 51)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News