×
Ad

ಹೈದರಾಬಾದ್‌ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭೇಟಿ; ರೋಹಿತ್‌ ಹೆತ್ತವರಿಗೆ ಸಾಂತ್ವನ

Update: 2016-01-19 13:38 IST

ಹೈದರಾಬಾದ್‌, ಜ.19: ಹೈದರಾಬಾದ್‌ನ ಕೇಂದ್ರ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ  ವಿದ್ಯಾರ್ಥಿಗಳು ಪ್ರತಿಭಟನೆ ನಿರತ ಸ್ಥಳಕ್ಕೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇಂದು   ಮಧ್ಯಾಹ್ನ  ಭೇಟಿ ನೀಡಿದ್ದಾರೆ.
ರಾಹುಲ್‌  ಅವರು ವಿದ್ಯಾರ್ಥಿ ಮುಖಂಡರನ್ನು  ಮತ್ತು ರೋಹಿತ್‌ ಅವರೊಂದಿಗೆ ಅಮಾನತುಗೊಂಡಿದ್ದ ಇತರ ನಾಲ್ಕು ವಿದ್ಯಾರ್ಥಿಗಳನ್ನು  ಭೇಟಿಯಾಗಿ ಮಾತುಕತೆ ನಡೆಸಿದರು.

ಇದೇ ಸಂದರ್ಭದಲ್ಲಿ ರಾಹುಲ್‌ ಅವರು ರೋಹಿತ್‌ ಅವರ ತಂದೆ,ತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ " ಉಪಕುಲಪತಿ ಈ ತನಕವೂ ರೋಹಿತ್‌ ಸಾವಿನ ಹಿನ್ನೆಲೆಯಲ್ಲಿ ಅವರ ಹೆತ್ತವರನ್ನು ಭೇಟಿಯಾಗಿಲ್ಲ. ಕನಿಷ್ಠ ಜ್ಞಾನವೂ ಇಲ್ಲದ ವಿಸಿ ಸ್ಥಾನದಲ್ಲಿರಲು ಯೋಗ್ಯರಲ್ಲ. ರಾಜೀನಾಮೆ ಕೊಟ್ಟು ಹೊರ ನಡೆಯಲಿ " ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News