×
Ad

‘ಲವ್ ಜಿಹಾದ್’ ಸೃಷ್ಟಿಕರ್ತರು ಸಂಘಪರಿವಾರದವರು

Update: 2016-02-11 23:36 IST

 ಗುಜರಾತ್‌ನಲ್ಲಿ ಲವ್ ಜಿಹಾದ್ ಎಂಬ ತಲೆ ಬರಹದ ಸುದ್ದಿ ನಿನ್ನೆ ಮತ್ತು ಇಂದಿನ ಸುದ್ದಿ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ರಾರಾಜಿಸಿದೆ. ಬೇರೆ ಬೇರೆ ಜಾತಿಯ ಹಿಂದೂ ಹುಡುಗಿಯರನ್ನು ಮದುವೆಯಾದರೆ ಇಂತಿಷ್ಟು ಲಕ್ಷ ರೂ.ಕೊಡುವುದಾಗಿ ವಾಗ್ದಾನ ಮಾಡುವ ಸಂದೇಶಗಳು ಗುಜರಾತಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಗುಜರಾತ್‌ನೊಳಗೆ ಹರಿದಾಡಿದೆ ಎಂದು ವರದಿಯಾಗಿತ್ತು. ಆದರೆ ಈಗ ಬಂದ ಸುದ್ದಿಯೆಂದರೆ ಇಂತಹಾ ಲವ್ ಜಿಹಾದ್ ಸಾಮಾಜಿಕ ತಾಣದಲ್ಲಿಯ ಸಂದೇಶ ಮುಸ್ಲಿಮರ ಹೆಸರಿನಲ್ಲಿ ಹರಿಯ ಬಿಟ್ಟವರು ಸ್ವತಃ ಸಂಘ ಪರಿವಾರದ ಸದಸ್ಯರೇ ಆಗಿರುವುದಾಗಿ ದೃಢಪಟ್ಟಿದೆ. ಗುಜರಾತ್‌ನಲ್ಲಿ ಇತ್ತೀಚಿನ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿದ ನಂತರ ಹಾಗೂ ಹಾರ್ದಿಕ್ ಪಟೇಲ್‌ರ ಜಾತಿ ಸಂಘಟನೆಯು ಬಿಜೆಪಿ ಯಿಂದ ಬಹುಸಂಖ್ಯಾತ ಮತದಾರರು ವಿಮುಖವಾಗುವಂತೆ ಮಾಡಿದೆಯೆಂದು ಖಚಿತ ಪಟ್ಟಿರುವುದರಿಂದ ತನ್ನ ಹಿಂದೂ ಮತ ಬ್ಯಾಂಕ್ ಪುನಃ ಗಳಿಸಲು ಬಿಜೆಪಿ ಮತ್ತು ಸಂಘ ಪರಿವಾರ ಕೂಡಿಕೊಂಡು ಈ ಲವ್ ಜಿಹಾದ್ ಸಂದೇಶಗಳನ್ನು ಮುಸ್ಲಿಮರ ಖೋಟಾ ಹೆಸರಲ್ಲಿ ವಾಟ್ಸ್ ಆ್ಯಪ್‌ನಲ್ಲಿ ಹರಿಯ ಬಿಟ್ಟಿರುವುದೆಂದು ಖಚಿತವಾಗಿದೆ. ತಮ್ಮ ಗುಪ್ತ ಅಜೆಂಡಾ ಸಾಧಿಸಲು ಕೇಸರಿ ಪಡೆಗಳು ಯಾವ ಕೀಳು ಮಟ್ಟಕ್ಕೆ ಇಳಿಯಲೂ ಹೇಸುವುದಿಲ್ಲ ಎಂದು ಇದರಿಂದ ಸಾಬೀತಾಯಿತು.

Writer - - ಆರ್. ಬಿ. ಶೇಣವ, ಮಂಗಳೂರು

contributor

Editor - - ಆರ್. ಬಿ. ಶೇಣವ, ಮಂಗಳೂರು

contributor

Similar News