ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ರ್ಯಾಂಪ್: ಶಾರುಖ್ ಗೆ 1.93 ಲಕ್ಷ ರೂ.ದಂಡ

Update: 2016-02-12 09:58 GMT

ಮುಂಬೈ: ಸರಕಾರಿ ಸ್ಥಳವನ್ನು ಅಕ್ರಮಿಸಿ ರ್ಯಾಂಪ್ ನಿರ್ಮಿಸಿದ್ದಕ್ಕಾಗಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್‌ಗೆ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ. ತನ್ನ ಬಂಗ್ಲೆಯ ಮುಂಭಾಗದಲ್ಲಿ ಅನಧಿಕೃತವಾಗಿ ಸರಕಾರಿ ಸ್ಥಳದಲ್ಲಿ ಶಾರುಕ್ ರ್ಯಾಂಪ್ ನಿರ್ಮಿಸಿದ್ದರು. ಬ್ರಹನ್ಮುಂಬಯಿ ಮುನ್ಸಿಪಾಲಿಟಿ ಕಾರ್ಪೊರೇಷನ್ 1,93,784 ರೂ. ದಂಡ ವಿಧಿಸಿದೆ.

ಮುಂಬೈಯ ತನ್ನ ಬಂಗ್ಲೆಯ ಮುಂಭಾಗದಲ್ಲಿದ್ದ ಕಾರ್ಪೊರೇಷನ್‌ನ ಸ್ಥಳದಲ್ಲಿ ವ್ಯಾನಿಟಿ ವ್ಯಾನ್ ಪಾರ್ಕ್ ಮಾಡಲಿಕ್ಕಾಗಿ ನಟ ರ್ಯಾಂಪ್ ನಿರ್ಮಿಸಿದ್ದರು ಎನ್ನಲಾಗಿದೆ. ಎಚ್.ಕೆ.ಬಾಬಾ ರೋಡ್, ಮೌಂಟನ್ ಮೇರಿ ರೋಡ್ ಸೇರುವ ಜಂಕ್ಷನ್ ಸಮೀಪದಲ್ಲಿ ಶಾರುಕ್‌ರ ಮುಂಬೈ ಬಂಗ್ಲೆ ಇದೆ. ಜಂಕ್ಷನ್ ಸಮೀಪದಲ್ಲಿ ಅನಧಿಕೃತವಾಗಿ ನಿರ್ಮಾಣ ಕಾರ್ಯ ನಡೆಸಿದ್ದಾರೆ ಎಂದು ಶಾರುಕ್ ವಿರುದ್ಧ ದೂರು ನೀಡಲಾಗಿತ್ತು.

ಕಾರ್ಪೊರೇಷನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತ ನಿರ್ಮಾಣವೆಂದು ಗುರುತಿಸಿ ಆಗಿರುವ ಹಾನಿಯ ದುರಸ್ತಿಗೆ ತಗಲುವ ಖರ್ಚನ್ನು ಲೆಕ್ಕ ಹಾಕಿ 1,93,784ರೂ. ದಂಡ ವಿಧಿಸಿದ್ದಾರೆ. ಮಾಹಿತಿಹಕ್ಕು ಅರ್ಜಿಯಲ್ಲಿ ಅಲ್ಲಿ ಶಾರುಕ್ ಅನಧಿಕೃತ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News