×
Ad

ಕಳ್ಳಸಾಗಣೆಯ ಚೈನೀಸ್ ಸಿಗರೇಟ್‌ಗಳಲ್ಲಿ ಮಲಿನ ವಸ್ತುಗಳಿವೆ: ಕಸ್ಟಮ್ಸ್ ವರದಿ

Update: 2016-02-15 17:54 IST

ತಿರುವನಂತಪುರಂ: ಕಳ್ಳಸಾಗಾಟದ ಮೂಲಕ ಬರುತ್ತಿರುವ ಸಿಗರೇಟ್‌ಗಳಲ್ಲಿ ಮನುಷ್ಯ ವಿಸರ್ಜನೆ, ಸತ್ತ ಪ್ರಾಣಿಗಳು ಹಾಗೂ ಮಣು,್ಣ ಅಸ್‌ಬೊಸ್ಟೋಸ್ ಇತ್ಯಾದಿಗಳ ಅಂಶಗಳಿವೆ ಎನ್ನಲಾಗಿದೆ. ಚೈನೀಸ್ ನಿರ್ಮಾಣದ ಎಸ್ಸೆ, ಮಾಲ್‌ಬರೊ, ವಿನ್‌ಸ್ಟಂಟ್, ಮೈಲ್ಡ್ ಸೆವೆನ್, ಪಾಲ್‌ಮಲ್, ಡರ್ಬಿ, ಕೆಂಟ್ ಮುಂತಾದ ಬ್ರಾಂಡುಗಳಲ್ಲಿ ಇಂತಹವಿವೆ ಎಂದು ವರದಿಗಳಾಗಿವೆ.

ಸಿಗರೇಟ್ ಸೇದುಗರ ಸಂಖ್ಯೆ ಅಧಿಕವಿದೆ. ಇದು ನೈಜ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಹಣಕ್ಕೆ ಮಾರಲಾಗುತ್ತಿದೆ. ಮಾರುಕಟ್ಟೆಯಲ್ಲಿ ಐವತ್ತು ರೂಪಾಯಿಯಿರುವ ಸಿಗರೆಟ್‌ನ್ನು 130ರೂಪಾಯಿಗೆ ಮಾರಲಾಗುತ್ತಿದೆ. ಒಂದುಪ್ಯಾಕೆಟ್ ಮಾರಿದರೆ ಅಂಗಡಿಯವನಿಗೆ 80ರೂಪಾಯಿ ಲಾಭವಿರುವುದರಿಂದ ಆತ ಇದನ್ನು ಹೆಚ್ಚು ಮಾರಲು ಪ್ರಯತ್ನಿಸುತ್ತಾನೆ. ಸಿಗರೆಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೆಟ್ ಪ್ಯಾಕ್‌ನಲ್ಲಿ ಬರೆದಿರಬೇಕೆಂದು ಕಾನೂನಿದೆ. ಆದರೆ ಕಳ್ಳಸಾಗಣೆಯ ಸಿಗರೇಟ್‌ನಲ್ಲಿ ಅದು ಬರೆದಿಲ್ಲ.

 ಕಾಸರಗೋಡು ಕೇಂದ್ರೀಕರಿಸಿ ದೊಡ್ಡ ಲಾಬಿ ಸಿಗರೆಟ್ ಕಳ್ಳಸಾಗಾಟದ ಹಿಂದಿದೆ ಎಂದು ಕಸ್ಟಂಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸಿಗರೆಟ್ ಕಳ್ಳಸಾಗಣೆಐದು ಪಟ್ಟು ಹೆಚ್ಚಳವಾಗಿದೆಯೆಂದು ಡೈರೆಕ್ಟರ್ ಆಫ್ ರೆವೆನ್ಯು ಇಂಟಲಿಜೆನ್ಸ್ ಹೇಳುತ್ತಿದೆ. ಸಿಗರೆಟ್ ಆಮದಿಗೆ ಶೆ.100ತೆರಿಗೆ ಇರುವುದರಿಂದ ಕಳ್ಳಸಾಗಣೆ ಮೂಲಕ ದೇಶಕ್ಕೆ ಸಿಗರೆಟ್ ತರಿಸಿಕೊಳ್ಳಲಾಗುತ್ತಿದೆ.

ಇವುಗಳಲ್ಲಿ ಹೆಚ್ಚಿನವು ನಕಲಿ ಎಂದು ಕಸ್ಟಂಸ್‌ಗೆ ಮಾಹಿತಿ ಲಭಿಸಿದೆ. ಈವರೆಗೆ ವಿಮಾನದ ಮೂಲಕ ಸಣ್ಣ ಪ್ರಮಾಣದಲ್ಲಿ ಸಿಗರೆಟ್ ತರಲಾಗುತ್ತಿತ್ತು. ಅದು ಈಗ ಭಾರೀ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಚಿನ್ನದಂತೆ ಹೆಚ್ಚು ಹಣ ನೀಡುವ ತಾಪತ್ರಯ ಇಲ್ಲದಿದ್ದರಿಂದ ಸಿಗರೆಟ್ ಕಳ್ಳಸಾಗಟಕ್ಕೆ ಹೆಚ್ಚು ಉತ್ಸಾಹ ಕಂಡು ಬರುತ್ತಿದೆ ಎಂದು ವರದಿಗಳು ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News