×
Ad

ರಾಂಪುರ್: ಇನ್ನು ಡಿಗ್ರಿಇರುವವರು ಮಾತ್ರ ರಸಗೊಬ್ಬರ, ಕೀಟನಾಶಕ ಮಾರಬೇಕು! - ಕೇಂದ್ರಸರಕಾರದಿಂದ ಹೊಸ ಮಾನದಂಡ!

Update: 2016-02-17 18:31 IST

ರಾಂಪುರ್: ಕೇಂದ್ರ ಸರಕಾರ ಕೀಟನಾಶಕ ಮತ್ತು ರಸಗೊಬ್ಬರ ಮಾರುವವರಿಗೆ ಹೊಸ ಮಾನದಂಡವನ್ನು ತಯಾರಿಸಿದೆ. ಇದರ ಪ್ರಕಾರ ಕೃಷಿ ಅಥವಾ ವಿಜ್ಞಾನ ವಿಷಯದಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಇರುವರು ಮಾತ್ರ ರಸಗೊಬ್ಬರ ಮತ್ತು ಕೀಟನಾಶಕದ ಅಂಗಡಿಯ ಪರವಾನಿಗೆ ಹೊಂದಬಹುದಾಗಿದೆ. ಪದವಿಯಾಧಾರದಲ್ಲಿಯೇ ಲೈಸೆನ್ಸ್ ನೀಡಲಾಗುವುದು. ಕೇಂದ್ರ ಸರಕಾರ ರೂಪಿಸಿರುವ ಹೊಸ ನಿಯಮ ಪ್ರಕಾರ ರಾಸಾಯನಿಕ ಗೊಬ್ಬರ ಕೀಟನಾಶಕ ಮಾರಟಕ್ಕೆ ಲೈಸೆನ್ಸ್ ಬೇಕಿದೆ. ಹಳೆಯ ಅಂಗಡಿಯವರಿಗೆ ಇದರ ಸೂಚನೆ ನೀಡಲಾಗಿದೆ.

ನಿಯಮ ಪ್ರಕಾರ ಎರಡು ವರ್ಷಗಳಲ್ಲಿ ಅವರು ಡಿಗ್ರಿ ಅಥವಾ ಡಿಪ್ಲೊಮಾ ಪಾಸು ಮಾಡಬೇಕಿದೆ. ದೇಶದಲ್ಲಿ ಖಾದ್ಯಬೀಜ, ಕೀಟನಾಶಕ ಅಂಗಡಿಯವರಲ್ಲಿ ಲೈಸೆನ್ಸ್ ಇದೆ ಆದರೆ ಅವರ ಬಳಿ ಕೃಷಿಗೆ ಸಂಬಂಧಿಸಿದ ಮಾಹಿತಿ ಇಲ್ಲ. ಹೊಸ ಹೊಸ ಕೃಷಿ ವಿಚಾರಗಳು ಅವರು ತಿಳಿದಿಲ್ಲ. ಆದ್ದರಿಂದ ಹೆಚ್ಚಿನ ಅಂಗಡಿಯವರು ಮಾಹಿತಿ ಕೊರತೆಯಿಂದ ರೈತರಿಗೆ ತಪ್ಪಾದ ಕೀಟನಾಶಕ ಇತ್ಯಾದಿಗಳನ್ನು ಅಥವಾ ಸಲಹೆ ನೀಡುತ್ತಿದ್ದಾರೆ. ಆದ್ದರಿಂದ ಸರಕಾರದ ಕೃಷಿಸಚಿವಾಲಯ ಹೊಸ ನಿಯಮವನ್ನು ರೂಪಿಸಿದೆ. ಹೊಸ ನಿಯಮ ಪ್ರಕಾರ ಕೃಷಿ ಅಥವಾ ವಿಜ್ಞಾನದ ವಿಷಯದಲ್ಲಿ ಡಿಗ್ರಿಯನ್ನು ಅಂಗಡಿಯವರು ಹೊಂದಿರಬೇಕಾಗಿದೆ. ಅದು ಇದ್ದರೆ ಮಾತ್ರ ಖಾದ್ಯ ಮತ್ತು ಕೀಟನಾಶಕ ಅಂಗಡಿಯನ್ನು ತೆರೆಬಹುದಾಗಿದೆ. ಡಿಗ್ರಿ ಆಧಾರದಲ್ಲಿಯೇ ಲೈಸೆನ್ಸ್ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರದ ಗಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಂಗಡಿಯಲ್ಲಿ ಕೆಲಸ ಮಾಡುವ ನೌಕರರು ಕೂಡಾ ಡಿಗ್ರಿಯನ್ನು ಹೊಂದಿರಬೇಕಾಗಿದೆ. ಹಳೆಯ ಅಂಗಡಿದಾರರಿಗೆ ಡಿಗ್ರಿ ಪಡೆಯಲು ಎರಡು ವರ್ಷಗಳ ಸಮಯ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News