×
Ad

251 ರೂ. v/s 5000 ರೂ. ಅಗ್ಗದ ಸ್ಮಾರ್ಟ್ ಫೋನ್ ಗುಣದಲ್ಲೂ ಅಗ್ಗವೇ ? ನೋಡಿ

Update: 2016-02-17 19:15 IST

ನವದೆಹಲಿ: ಕೇವಲ 251 ರೂಪಾಯಿ ಬೆಲೆಯ ಮೊಬೈಲ್ ಬಿಡುಗಡೆ ಮಾಡುವ ಘೋಷಣೆ ಮೂಲಕ ನೋಯ್ಡ ಮೂಲದ ರಿಂಗಿಂಗ್ ಬೆಲ್ ದೇಶಾದ್ಯಂತ ಸಂಚಲನ ಮೂಡಿಸಿದೆ. ಬಹುತೇಕ ದುಬಾರಿ ಮೊಬೈಲ್‌ಗಳ ಕವಚದಷ್ಟು ಬೆಲೆಯಲ್ಲಿ ಇಂಥ ಕಚ್ಚಾ ಸ್ಮಾರ್ಟ್ ಫೋನ್ ನೀಡಲು ಸಾಧ್ಯವೇ?

ಈ ಅಗ್ಗದ ಸ್ಮಾರ್ಟ್ ಫೋನ್‌ನ ಪ್ರಚಾರ ಶಾಟ್‌ಗಳನ್ನು ನೋಡಿದರೆ, ತೀರಾ ನಾಜೂಕಿನ, ಅತ್ಯಾಧುನಿಕ ವಿನ್ಯಾಸದ, ಬದಿಯಲ್ಲಿ ಬಹುತೇಕ ಪಟ್ಟಿಗಳಿಲ್ಲದ ಸಾಧನ. ಆದರೆ ಸ್ಮಾರ್ಟ್‌ಫೋನ್‌ಗಳ ವಿಚಾರಕ್ಕೆ ಬಂದಾಗ ಒಳಗೇನಿದೆ ಎನ್ನುವುದು ಮುಖ್ಯವಾಗುತ್ತದೆ. ಆದ್ದರಿಂದ ಇದನ್ನು ಕೆಲ ಜನಪ್ರಿಯ ಪ್ರವೇಶಮಟ್ಟದ ಸ್ಮಾರ್ಟ್‌ಫೋನ್‌ಗಳ ಜತೆ ತಾಳೆ ನೋಡೋಣ. ಇವುಗಳಲ್ಲಿ ಮುಖ್ಯವಾದ್ದೆಂದರೆ, ಲೆನೊವಾ ಎ2010, ಕಾರ್ಬಾನ್, ಮಾಚ್ ವನ್, ಟಿಟಾನಿಯಂ.

ನಾವು ಕೆಲ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಲೆನೊವೊ ಹಾಗೂ ಕಾರ್ಬಾನ್ ಸ್ಮಾರ್ಟ್‌ಫೋನ್‌ಗಳ ಬೆಲೆ 4500 ರೂಪಾಯಿ. ಹೆಚ್ಚಿನ ಬೆಲೆ ಎಂದರೆ ಉತ್ತಮ ಕ್ಷಮತೆ ಎಂದು ಯಾವಾಗಲೂ ಭಾವಿಸಬೇಕಾಗಿಲ್ಲ.

1.ಪ್ರದರ್ಶಕ: ಫ್ರೀಡಂ-251: ನಾಲ್ಕು ಇಂಚು ಸ್ಕ್ರೀನ್ (275 ಪಿಪಿಐ), ಲೆನೋವಾ ಎ2010- 4.5 ಇಂಚು (218 ಪಿಪಿಐ), ಕಾರ್ಬಾನ್ ಮಾಚ್ ವನ್ ಟಿಟಾನಿಯಂ- 4.7 ಇಂಚು (312 ಪಿಪಿಐ).

ಫ್ರೀಡಂ ಅತ್ಯಂತ ಚಿಕ್ಕ ಸ್ಕ್ರೀನ್ ಹೊಂದಿದೆ. ಆದರೆ ಪಿಕ್ಸೆಲ್ ಸಾಂದ್ರತೆಯಲ್ಲಿ ಇತರ ಎರಡು ಫೋನ್‌ಗಳ ಮಧ್ಯದಲ್ಲಿದೆ. ಪ್ರತಿ ಇಂಚ್‌ಗೆ 275 ಪಿಕ್ಸೆಲ್ ಹೊಂದಿರುವುದು 251 ರೂಪಾಯಿ ಬೆಲೆಯ ಸ್ಮಾರ್ಟ್‌ಫೋನ್‌ಗೆ ಕೆಟ್ಟದ್ದೇನೂ ಅಲ್ಲ. ಐ-ಫೋನ್ ಖ್ಯಾತಿಯ ರೆಟಿನಾ ಪ್ರದರ್ಶಕಗಳಲ್ಲಿ ಇದು 326 ಪಿಕ್ಸೆಲ್ ಇದ್ದು, ಅದು 100 ಪಟ್ಟು ದುಬಾರಿ.

2. ಪ್ರೊಸೆಸರ್: ಫ್ರೀಡಂ-251: 1.3 ಗಿಗಾ ಹರ್ಟ್ಸ್ ಕ್ವಾಡ್ ಕೋರ್. ಲೆನೋವಾ ಎ2010- 1 ಗಿಗಾ ಹರ್ಟ್ಸ್ ಕ್ವಾಡ್ ಕೋರ್. ಕಾರ್ಬಾನ್ ಮಾಚ್ ವನ್ ಟಿಟಾನಿಯಂ- 1.3 ಗಿಗಾ ಹರ್ಟ್ಸ್ ಕ್ವಾಡ್ ಕೋರ್.

ಈ ವಿಚಾರದಲ್ಲಿ ಫ್ರೀಡಂ, ಕಾರ್ಬಾನ್ ಜತೆ ಅಗ್ರಸ್ಥಾನ ಹಂಚಿಕೊಂಡಿದೆ. ಆದರೆ ಯಾವುದರಿಂದ ಪ್ರೊಸೆಸರ್ ಮಾಡಲಾಗಿದೆ ಎನ್ನುವುದು ನಮಗಿನ್ನೂ ತಿಳಿದಿಲ್ಲ. ಇದು ನಿಜವಾಗಿಯೂ ಬದಲಾವಣೆಗೆ ಕಾರಣವಾಗುತ್ತದೆಯೇ? ಖಂಡಿತವಾಗಿಯೂ. ಎರಡು ವರ್ಷ ಹಳೆಯ ಪ್ರೊಸೆಸರ್, ಕೋರ್ ಹಾಗೂ ಗಿಗಾಹರ್ಟ್ಸ್ ಸಂಖ್ಯೆಯ ಹೊರತಾಗಿಯೂ ಹೊಸದಕ್ಕಿಂತ ಕಡಿಮೆ ವೇಗದಲ್ಲಿ ಕೆಲಸ ಮಾಡುತ್ತದೆ.

3. ಆಪರೇಟಿಂಗ್ ಸಿಸ್ಟಂ- ಎಲ್ಲ ಮೂರೂ ಆಂಡ್ರಾಯ್ಡಾ ಲಾಲಿಪಾಪ್ ಮೂಲಕ ಕಾರ್ಯನಿರ್ವಹಿಸುತ್ತವೆ. ಆದರೆ ಫ್ರೀಡಂನ ಪ್ರಕಟಣೆಯಲ್ಲಿ ಇದರ ಸ್ಪೆಲ್ಲಿಂಗ್ ಬೇರೆ ಇದೆ. ಇದು ಒಳ್ಳೆಯ ಅಂಶ, ಪಾಲಿಪಾಪ್ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೇ ಹೆಚ್ಚು ಸುರಕ್ಷಿತ ಹಾಗೂ ಗರಿಷ್ಠ ಸಾಮರ್ಥ್ಯ ಹೊಂದಿದೆ.

4. ದಾಸ್ತಾನು ಹಾಗೂ ರ್ಯಾಮ್: ಎಲ್ಲ ಮೂರೂ ಸಾಧನಗಳು 8ಜಿಬಿ ಹಾಗೂ 32 ಜಿಬಿ ವರೆಗೆ ವಿಸ್ತರಿಸಬಹುದಾದ ದಾಸ್ತಾನು ಸಾಮರ್ಥ್ಯ ಹೊಂದಿದ್ದು, 1ಜಿಬಿ ರ್ಯಾಮ್ ಹೊಂದಿವೆ.

ರ್ಯಾಮ್ ಹಾಗೂ ದಾಸ್ತಾನು ಸ್ಥಳಾವಕಾಶ ಫ್ರೀಡಂ 251ನಲ್ಲಿ ಮೂಲಭೂತವಾಗಿದ್ದರೂ, ಇದು ಲಿನೊವಾ ಹಾಗೂ ಕಾರ್ಬಾನ್‌ನ ಸ್ಥಳಾವಕಾಶದಷ್ಟೇ ಇದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. 1 ಜಿಬಿ ರ್ಯಾಮ್ ಎಂದರೆ ನೀವು ಹಲವು ಕಾರ್ಯಗಳನ್ನು ಏಕಕಾಲಕ್ಕೆ ನಿರ್ವಹಿಸುವಂತಿಲ್ಲ.

5. ಕ್ಯಾಮೆರಾ: ಫ್ರೀಡಂ-251: ಹಿಂದೆ 3.2 ಮೆಗಾಪಿಕ್ಸೆಲ್, ಮುಂದೆ 0.3 ಎಂಪಿ. ಲೆನೋವಾ ಎ2010- ಹಿಂದೆ 5 ಮೆಗಾಪಿಕ್ಸೆಲ್, ಮುಂದೆ 2 ಎಂಪಿ. ಕಾರ್ಬಾನ್ ಮಾಚ್ ವನ್ ಟಿಟಾನಿಯಂ- ಹಿಂದೆ 8 ಮೆಗಾಪಿಕ್ಸೆಲ್, ಮುಂದೆ 5 ಎಂಪಿ. ಹೇಗಾದರೂ ಮಾಡಿ ವೆಚ್ಚ ಕಡಿಮೆ ಮಾಡಬೇಕು ಎನ್ನುವಲ್ಲಿ ಕ್ಯಾಮೆರಾ ಮೇಲೆ ಕಣ್ಣುಬಿದ್ದಿದೆ. ಫ್ರೀಡಂ-251ನಲ್ಲಿರುವ ಕ್ಯಾಮೆರಾ 2005-06ರಲ್ಲಿದ್ದ ಫ್ಲಿಫ್ ಫೋನ್‌ಗಳಿಗೆ ಸಮನಾದದ್ದು. ಈ ವಿಚಾರದಲ್ಲಿ ಲೆನೋವಾ ಹಾಗೂ ಕಾರ್ಬಾನ್ ಮುಂದಿವೆ. ಆದ್ದರಿಂದ ಒಳ್ಳೆಯ ಸೆಲ್ಫಿಯನ್ನು ಮಾತ್ರ ಇದರಲ್ಲಿ ನಿರೀಕ್ಷಿಸಬೇಡಿ.

ವಿವರಣೆ ಪತ್ರಗಳ ಆಧಾರದಲ್ಲಿ ನೋಡಿದರೆ, ಇತರ ದುಬಾರಿ ಪ್ರತಿಸ್ಪರ್ಧಿಗಳಿಗಿಂತ ತೀರಾ ಮುಂದಿದೆ. ಏಕೆಂದರೆ ಪ್ರತಿಸ್ಪರ್ಧಿಗಳು ಕನಿಷ್ಟ 18 ಪಟ್ಟು ದುಬಾರಿ. ಆದರೆ ಕಾಗದದಲ್ಲಿರುವುದಕ್ಕೂ ಸಾಫ್ಟ್‌ವೇರ್‌ನ ಗರಿಷ್ಠಗೊಳಿಸಲಾದ ಸಾಮರ್ಥ್ಯಕ್ಕೂ ಸಂಬಂಧವಿಲ್ಲ. ಈ ಸಾಧನದ ಬಗ್ಗೆ ಇರುವ ದೊಡ್ಡ ಹೆದರಿಕೆ ಎಂದರೆ, ಬ್ಲೋಟ್‌ವೇರ್/ ಕ್ರೇಪ್‌ವೇರ್ ಪ್ರಮಾಣ (ಅನಗತ್ಯ ಆಪ್). ಇದು ಮೊದಲೇ ಲೋಡ್ ಆಗಿರುತ್ತದೆ. ಇದು ಸಾಧನದ ಒಟ್ಟಾರೆ ಅಭದ್ರತೆಗೆ ಕಾರಣವಾಗುತ್ತದೆ.

ಇಷ್ಟಾಗಿಯೂ ವಿವರಣೆ ಪತ್ರದ ಪ್ರಕಾರ ಇದಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ಕೇವಲ 251 ರೂಪಾಯಿಗೆ ಯಾವುದೂ ನೀಡಲು ಸಾಧ್ಯವೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News