ಇನ್ನೂ ಕೋರ್ಟ್‌ನಲ್ಲೇ ಉಳಿದ ಕನ್ಹೇಹ ಕುಮಾರ್... !
ಹೊಸದಿಲ್ಲಿ, ಫೆ.17: ಜವಹಾರ‍್ ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೇಯ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದರೂ, ಆತನನ್ನು ಜೈಲಿಗೆ ಕರೆದೊಯ್ಯುವ ಸಾಹಸಕ್ಕೆ ಪೊಲೀಸರು ಇಳಿದಿಲ್ಲ. ಈ ಕಾರಣದಿಂದಾಗಿ ಕನ್ಹೇಯಾ ಪಟಿಯಾಲ ಹೌಸ್ ಕೋರ್ಟ್‌ನಲ್ಲೇ ಇನ್ನೂ ಉಳಿದುಕೊಂಡಿದ್ಧಾರೆ.
ಕನ್ಹೇಯ ಕುಮಾರ್‌ಗೆ ಪಟಿಯಾಲ ಹೌಸ್ ಕೋರ್ಟ್ ಮಾ.2ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತರುತ್ತಿದ್ದಾಗ ವಕೀಲರ ಗುಂಪೊಂದು ಹಲ್ಲೆಗೈದು ಧಾಂದಲೆ ನಡೆಸಿದ್ದರು. ನ್ಯಾಯಾಲಯದ ಆವರಣದಲ್ಲಿ ಬಂದೋಬಸ್ತ್‌ಗೆ ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ, ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ವಕೀಲರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ., ಕಲ್ಲು ತೂರಾಟ ನಡೆದಿತ್ತು.
ನ್ಯಾಯಾಲಯದ ಹೊರಗೆ ಸುಮಾರು ನೂರಕ್ಕೂ ಅಧಿಕ ವಕೀಲರು ಜಮಾಯಿಸಿದ್ದಾರೆ. ಅವರು ಮತ್ತೆ ವಿದ್ಯಾರ್ಥಿ ನಾಯಕ ಕನ್ಹೇಯ ಕುಮಾರ್ ಮೇಲೆ ನಡೆಸಿಯಾರು ಎಂಬ ಭೀತಿ ಎದುರಾಗಿದೆ. ಸಂಭವನೀಯ ಅನಾಹುತ ತಪ್ಪಿಸಲು ಪೊಲೀಸರು ಅತಿಯಾದ ಕಾಲಜಿ ವಹಿಸಿದ ಹಿನ್ನೆಲೆಯಲ್ಲಿ ಕನ್ಹೇಯ ಕುಮಾರ‍್ ಇನ್ನೂ ನ್ಯಾಯಾಲಯದಲ್ಲೇ ಉಳಿದಿದ್ದಾರೆ.