ದೇಶಭಕ್ತಿಯ ಬಗ್ಗೆ ಆರೆಸ್ಸೆಸ್,ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ : ರಾಹುಲ್ ಗಾಂಧಿ
ರಾಯ್‌ಬರೇಲಿ,ಫೆ.19: ದೇಶಭಕ್ತಿ ಕುರಿತಂತೆ ತಾನು ಆರೆಸ್ಸೆಸ್ ಮತ್ತು ಬಿಜೆಪಿಯಿಂದ ಪಾಠಗಳನ್ನು ಕಲಿಯಬೇಕಾಗಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದರು.ರಾಹುಲ್ ದೇಶವಿರೋ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಇವೆರಡೂ ಆರೋಪಿಸಿವೆ.
ಜೆಎನ್‌ಯು ವಿದ್ಯಾರ್ಥಿಗಳಿಗೆ ತನ್ನ ಬೆಂಬಲ ಮತ್ತು ಬಿಜೆಪಿಯಿಂದ ಪ್ರತಿಭಟನೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು,ದೇಶಭಕ್ತಿ ತನ್ನ ರಕ್ತದಲ್ಲಿಯೇ ಇದೆ ಎಂದರು.
ದೇಶದಲ್ಲಿಂದು ಎಂತಹ ಸ್ಥಿತಿಯಿದೆ ಎಂದರೆ ಭಿನ್ನಾಭಿಪ್ರಾಯದ ಎಲ್ಲ ಧ್ವನಿಗಳನ್ನು ದಮನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ತನ್ನ ಅಮೇಠಿ ವಿಧಾನಸಭಾ ಕೇತ್ರದ ಸಲೋನ್‌ನಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಅವರು,ಬೇಳೆಕಾಳುಗಳ ಬೆಲೆಗಳು ಇದೇ ಮೊದಲ ಬಾರಿಗೆ ಗಗನಕ್ಕೇರಿವೆ. ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ನೇತೃತ್ವದ ಸರಕಾರವು ವಿಲಗೊಂಡಿದೆ. ಅವರು (ಪ್ರಧಾನಿ ನರೇಂದ್ರ ಮೋದಿ)ಪ್ರತಿ ರೈತನಿಗೆ 15 ಲ.ರೂ.ನೀಡಬೇಕು ಇಲ್ಲವೇ ಅಕಾರದಿಂದ ತೊಲಗಬೇಕು ಎಂದರು.
ರೈತರಿಗೆ ಸಂಬಂಸಿದ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ ಅವರು,ಮೋದಿ ಸರಕಾರವು ತನ್ನ ಚುನಾವಣಾ ಆಶ್ವಾಸನೆಗಳನ್ನು ಈಡೇರಿಸುತ್ತಿಲ್ಲ ಎಂದು ಆಪಾದಿಸಿದರು.