ಜನಪ್ರತಿನಿಧಿಗಳು ಹೊಣೆಗಾರಿಕೆ ಮರೆಯದಿರಲಿ
ಮಾನ್ಯರೆ,
ಭಾರೀ ಕುತೂಹಲ ಮೂಡಿಸಿದ್ದ ಹಾಗೂ ಪ್ರತಿಷ್ಠೆಯ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ 2 ಕ್ಷೇತ್ರವನ್ನು ಗೆದ್ದು ಬೀಗಿದ್ದ ಬಿಜೆಪಿ, ಪಂಚಾಯತ್ ಅಖಾಡದಲ್ಲಿ ಸೋತಿದೆ. ಜೆಡಿಎಸ್ ಹಾಗೂ ಇತರ ಪಕ್ಷಗಳು ಇನ್ನು ಅಂಬೆಗಾಲು ಇಡುತ್ತಿದೆ ಎಂಬುದು ಸಾಬೀತಾಗಿದೆ. ಉಪಚುನಾವಣೆಯಾಗಲಿ, ಪಂಚಾಯತ್ ಚುನಾವಣೆಯಾಗಲಿ ಇದು ಅನೇಕ ಸಂದೇಶಗಳನ್ನ ಸಾರಿದೆ. ಈ ಸಲದ ಚುನಾವಣೆಂುಲ್ಲಿ ಕುಟುಂಬ ರಾಜಕಾರಣಕ್ಕೆ ಜನರು ಮನ್ನಣೆ ನೀಡಿದ್ದಾರೆ ಎಂಬುದು ಕೂಡಾ ಸಾಬೀತಾಗಿದೆ. ಅಲ್ಲದೆ ‘ನೋಟಾ’ ಹೆಚ್ಚು ಚಲಾವಣೆಯಾಗಿರೋದು ರಾಜಕಾರಣಿಗಳಿಗೆ ಬಯ ಮೂಡಿಸಿದೆ. ೆಲ್ಲಿಸುವ ಮೂಲಕ ಜನರು ಅಭ್ಯರ್ಥಿಗಳಿಗೆ ಇನ್ನಷ್ಟು ಜವಾಬ್ದಾರಿಯನ್ನು ನೀಡಿದ್ದಾರೆ. ಚುನಾವಣೆ ಮುನ್ನ ಅದೇಗೆ ಮನೆ-ಮನೆಗೆ ತೆರಳಿ ನಗಾಡುತ್ತಾ ಹೇಗೆ ಭರವಸೆ ನೀಡಿದರೋ ಅದೇ ರೀತಿ ಮುಂದೆ ಜನರ ಬದುಕು, ಬವಣೆಗಳನ್ನ ತಿಳಿದುಕೊಂಡು ಅವರ ಮನವಿ, ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ. ಜನರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಮೊಬೈಲ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿ, ಕುಂದು-ಕೊರತೆಗಳನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸಬೇಕು. ನೊಂದಿತರ, ಅಸ್ಪಶ್ಯರ ಪರ ಕಾರ್ಯನಿರ್ವಹಿಸಬೇಕಾಗಿದೆ. ಸರಕಾರಿ ಯೋಜನೆಗಳನ್ನ್ನು ಸಂಪೂರ್ಣವಾಗಿ ಬಳಸುವ ಪ್ರಯತ್ನ ಮಾಡಬೇಕಾಗಿದೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಪಿಂಚಣಿ, ವೃದ್ಧಾಪ್ಯ ವೇತನ ಹೀಗೆ ಎಲ್ಲ ಯೋಜನೆಗಳು ತಲುಪುವಂತೆ ವ್ಯವಸ್ಥೆ ಮಾಡಬೇಕಾಗಿದೆ. ಹೀಗಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ಭವಿಷ್ಯ ಇರುತ್ತೆ. ಅಧಿಕಾರ ಸಿಕ್ಕಿದ ತಕ್ಷಣ ಜನರನ್ನ ಮರೆಯುವ ಜನಪ್ರತಿನಿಧಿಗಳಿಗೆ ಜನರೇ ಛೀಮಾರಿ ಹಾಕಬೇಕು. ಬಹಿಷ್ಕಾರ ಹಾಕಬೇಕು. ‘ಅಧಿಕಾರ’ ಕೇವಲ ನಾಮಮಾತ್ರಕ್ಕೆ ಇರದೇ ನ್ಯಾಯಯುತವಾಗಿ ಅಧಿಕಾರ ನಿರ್ವಹಿಸುವ ಹೊಣೆಗಾರಿಕೆ ಗೆದ್ದ ಅಭ್ಯರ್ಥಿಗಳ ಮೇಲಿದೆ. -