ವಿಯೆನ್ನಾ ವಿಶ್ವದ ನಂ.1, ದೆಹಲಿಗೆ 161ನೆ ಸ್ಥಾನ : ಸಮೀಕ್ಷೆ

Update: 2016-02-24 09:34 GMT

ಲಂಡನ್ : ಜೀವನ ಸಾಗಿಸಲು ವಿಯೆನ್ನಾ ವಿಶ್ವದಲ್ಲಿಯೇ ಅತ್ಯುತ್ತಮ ನಗರವೆಂದು ಅಂತರಾಷ್ಟ್ರೀಯ ಸಮೀಕ್ಷೆಯೊಂದು ಹೇಳಿದೆ. ಆದರೆ ಭಾರತದ ಯಾವೊಂದು ನಗರವೂ ಪ್ರಥಮ 100 ಅತ್ಯುತ್ತಮ ನಗರಗಳ ಪಟ್ಟಿಯಲ್ಲಿಲ್ಲವೆಂಬುದು ಖೇದಕರ.

18ನೇ ಮರ್ಸರ್ ಕ್ವಾಲಿಟಿ ಆಫ್ ಲೈಫ್ ಸ್ಟಡಿ ಎಂಬ ಈ ಸಮೀಕ್ಷೆಯಂಗವಾಗಿ ವಿಶ್ವದಾದ್ಯಂತ 230 ನಗರಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿತ್ತು. ಸುಮಾರು 1.8 ಮಿಲಿಯ ಜನಸಂಖ್ಯೆಯಿರುವ ವಿಯೆನ್ನಾದ ನಂತರದ ಸ್ಥಾನಗಳುಆಕ್ಲೆಂಡ್, ಮ್ಯೂನಿಚ್ ಹಾಗೂ ವ್ಯಾಂಕೂವರ್‌ಗೆ ಹೋಗಿವೆ. ವಿಶ್ವವಿಖ್ಯಾತನಗರಗಳಾದ ಲಂಡನ್, ಪ್ಯಾರಿಸ್ ಹಾಗೂ ನ್ಯೂಯಾರ್ಕ್ ಮೊದಲ 30 ನಗರಗಳಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರೆ, ಬಾಗ್ದಾದ್ ವಿಶ್ವದ ಅತ್ಯಂತ ಕೆಟ್ಟ ನಗರವಾಗಿ ಗುರುತಿಸಲ್ಪಟ್ಟಿದೆ.


ಈ ಸಮೀಕ್ಷೆಯಲ್ಲಿ ಭಾರತದ ನಗರಗಳಲ್ಲಿ ಹೈದರಾಬಾದ್ 139ನೇ ಸ್ಥಾನ ಪಡೆದರೆ, ಪುಣೆ 144ನೇ ಸ್ಥಾನ ಪಡೆದಿದೆ. ನಂತರದ ಸ್ಥಾನಗಳನ್ನು ಬೆಂಗಳೂರು (145), ಚೆನ್ನೈ(150), ಮುಂಬೈ (152), ಕೊಲ್ಕತ್ತಾ (160) ಹಾಗೂ ದೆಹಲಿ (161) ಪಡೆದಿವೆ.


ಆರೋಗ್ಯ, ಶಿಕಣ, ಗೃಹ ನಿರ್ಮಾಣ, ಪರಿಸರ ಮುಂತಾದ ಅಂಶಗಳನ್ನು ಈ ಸಮೀಕ್ಷೆಯಲ್ಲಿ ಪರಿಶೀಲಿಸಲಾಗಿದ್ದು ದೊಡ್ಡ ದೊಡ್ಡ ಕಂಪೆನಿಗಳು ತಮ್ಮಕೈಗಾರಿಕೆಗಳನ್ನು ಎಲ್ಲಿ ಸ್ಥಾಪಿಸುವುದು ಸೂಕ್ತಹಾಗೂ ಉದ್ಯೋಗಿಗಳಿಗೆ ನೀಡಬೇಕಾದ ವೇತನದ ಬಗ್ಗೆ ಈ ಸಮೀಕ್ಷೆಯನ್ನು ಗಮನಿಸಿ ನಿರ್ಧಾರವನ್ನು ಕೈಗೊಳ್ಳುತ್ತವೆ, ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.


ಜರ್ಮನ್ ಮಾತನಾಡುವ ಜನರಿರುವ ನಗರಗಳ ಪೈಕಿ ವಿಯೆನ್ನಾದೊಂದಿಗೆ ಮೊದಲ ಏಳು ನಗರಗಳ ಪಟ್ಟಿಯಲ್ಲಿ ಝೂರಿಚ್, ಮ್ಯೂನಿಚ್, ಡುಸ್ಸೆಲ್‌ಡೊರ್ಫ್ ಹಾಗೂ ಫ್ರಾಂಕ್‌ಫರ್ಟ್ ಸೇರಿವೆ.


ವಿಶ್ವಬ್ಯಾಂಕ್ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿಯೇ ಅತ್ಯಧಿಕ ಜಿಡಿಪಿ ಹೊಂದಿರುವ ರಾಷ್ಟ್ರಗಳಲ್ಲಿ ಆಸ್ಟ್ರಿಯಾ ಒಂದಾಗಿದ್ದು, ಈ ನಿಟ್ಟಿನಲ್ಲಿಅಮೆರಿಕಾ, ಜರ್ಮನಿ ಹಾಗೂ ಬ್ರಿಟನ್ ನಂತರದ ಸ್ಥಾನವನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News