ಎಸ್ಸಿ-ಎಸ್ಟಿಗಳ ವಿರುದ್ಧ ದೌರ್ಜನ್ಯ ಪ್ರಕರಣ ಹೆಚ್ಚಳ: ಗೃಹ ಸಚಿವಾಲಯ
Update: 2016-02-25 23:33 IST
ಹೊಸದಿಲ್ಲಿ, ಫೆ.25: ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸದಸ್ಯರ ವಿರುದ್ಧ ಅಪರಾಧಗಳು 2013-14ರ ನಡುವೆ ‘ಏರಿಕೆಯ ಪ್ರವೃತ್ತಿಯನ್ನು’ ತೋರಿಸಿವೆಯೆಂದು ಕೇಂದ್ರ ಗೃಹ ಸಚಿವಾಲಯವು ಬುಧವಾರ ಸಂಸತ್ತಿಗೆ ತಿಳಿಸಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಮತ್ತು ಅದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಲೋಕಸಭೆ ಚರ್ಚೆ ನಡೆಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ(ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಚಿವಾಲಯ, ಪರಿಶಿಷ್ಟ ಜಾತಿಗಳ ಸದಸ್ಯರ ಮೇಲಿನ ದೌರ್ಜನ್ಯದ 47 ಸಾವಿರ ಪ್ರಕರಣಗಳು 2014ರಲ್ಲಿ ದಾಖಲಾಗಿವೆ. ಹಿಂದಿನ ವರ್ಷದಲ್ಲಿ 39 ಸಾವಿರ ಪ್ರಕರಣಗಳು ದಾಖಲಾಗಿದ್ದವೆಂದು ರಾಜ್ಯ ಸಭೆಗೆ ಮಾಹಿತಿ ನೀಡಿತು. ಭಾರತದಲ್ಲಿ ಅಪರಾಧಗಳ ಬಗ್ಗೆ ಎಲ್ಲ ರಾಜ್ಯಗಳಿಂದ ಅಂಕಿ-ಅಂಶ ಸಂಗ್ರಹಿಸಲು ಹಾಗೂ ವಿಶ್ಲೇಷಿಸಲು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಬೇಕಾಗುತ್ತದೆ.