‘ಯುಪಿಎಸ್ಸಿ ಪರೀಕ್ಷೆಗಳ ನೋಂದಣಿ ಶೇ.100 ಆನ್‌ಲೈನ್’
Update: 2016-02-25 23:50 IST
ಹೊಸದಿಲ್ಲಿ, ಫೆ.25: ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಂದಣಿಯನ್ನು ಶೇ.100ರಷ್ಟು ಆನ್‌ಲೈನ್‌ಗೊಳಿಸಲಾಗಿದೆ. ಪಾರದರ್ಶಕತೆ ಖಚಿತಪಡಿಸುವುದು ಇದರ ಉದ್ಧೇಶವಾಗಿದೆಯೆಂದು ರಾಜ್ಯಸಭೆಗಿಂದು ತಿಳಿಸಲಾಗಿದೆ.
ಸಿಬ್ಬಂದಿ ಆಯ್ಕೆ ಆಯೋಗಕ್ಕೆ(ಎಸ್‌ಎಸ್‌ಸಿ) ಆನ್‌ಲೈನ್ ನೋಂದಣಿಯನ್ನು ಶೇ.95ರಿಂದ ಶೇ.100ಕ್ಕೇರಿಸುವ ಪ್ರಯತ್ನ ನಡೆಯುತ್ತಿದೆಯೆಂದು ಸಿಬ್ಬಂದಿ ಹಾಗೂ ಸಾರ್ವಜನಿಕ ದೂರುಗಳ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಪ್ರಶ್ನಾವಧಿಯಲ್ಲಿ ಮೇಲ್ಮನೆಗೆ ಮಾಹಿತಿ ನೀಡಿದರು.
ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ನೋಂದಣಿಗೆ ಸಂಬಂಧಿಸಿ, ಸರಕಾರವು ಕಳೆದ 18-20 ತಿಂಗಳಲ್ಲಿ ಅನೇಕ ಸುಧಾರಣೆಗಳಿಗೆ ಚಾಲನೆ ನೀಡಿದೆಯೆಂದು ಅವರು ತಿಳಿಸಿದರು.