ಟಿವಿ ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ನೇಣಿಗೆ ಶರಣಾದ ಬಾಲಕ
Update: 2016-02-27 10:54 IST
ಕಲ್ಯಾಣ್(ಮುಂಬೈ), ಫೆ.27: ಸಹೋದರಿ ಟಿವಿ ನೋಡಲು ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 11ರ ಹರೆಯದ ಬಾಲಕನೊಬ್ಬ ನೇಣಿಗೆ ಶರಣಾದ ಘಟನೆ ಉಪ ನಗರ ಕಲ್ಯಾಣ್‌ನಲ್ಲಿ ನಡೆದಿದೆ.
8ನೆ ತರಗತಿಯ ಬಾಲಕನೋರ್ವ 16ರ ಹರೆಯದ ತನ್ನ ಸಹೋದರಿ ಟಿವಿ ರಿಮೋಟ್ ಕಸಿದುಕೊಂಡು ಬೇರೊಂದು ಚಾನಲ್ ಹಾಕಿದಳೆಂಬ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿ ಕೋಣೆಯೊಳಗೆ ತೆರಳಿ ಈ ಕೃತ್ಯವೆಸಗಿದ್ದಾನೆ.
ಮೃತ ಯುವಕ ಮೂರು ವರ್ಷಗಳ ಹಿಂದೆ ತನ್ನ ತಂದೆ ಮೃತರಾದ ನಂತರ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.