×
Ad

ಮಧ್ಯಪ್ರದೇಶ ನೇಮಕಾತಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ರಿಗೆ ಜಾಮೀನು ರಹಿತ ವಾರಂಟ್!

Update: 2016-02-27 11:59 IST

ಭೊಪಾಲ: ಮಧ್ಯಪ್ರದೇಶದ ವಿಧಾನಸಭಾ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ರ ವಿರುದ್ಧ ಇಂದು ಸ್ಥಳೀಯ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.

      ಇಲ್ಲಿನ ವಿಶೇಷ ಸತ್ರ ನ್ಯಾಯಾಧೀಶರಾದ ಕಾಶಿನಾಥ ಸಿಂಗ್ ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯದಲ್ಲಿ ಹಾಜಾರಾಗದ್ದರಿಂದ ಅವರ ವಿರುದ್ಧ ಬಂಧನ ವಾರಂಟ್‌ಹೊರಡಿಸಿದ್ದಾರೆ. ಇದಕ್ಕಿಂತ ಮೊದಲು ನ್ಯಾಯಾಲಯದಲ್ಲಿ 169 ಪುಟಗಳ ಆರೋಪ ಪತ್ರವನ್ನು ಪೊಲೀಸರು ಸಮರ್ಪಿಸಿದ್ದರು. ರಾಜ್ಯಸಭಾಸದಸ್ಯ ದಿಗ್ವಿಜಯ ಸಿಂಗ್‌ರನ್ನು ಇಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಈ ಪ್ರಕರಣದಲ್ಲಿ ಕೆ.ಕೆ. ಕೌಶಲ್‌ಮತ್ತು ಎ.ಕೆ ಪ್ಯಾಸಿ ಸಹಿತ ಇತರ ಏಳು ಆರೋಪಿಗಳಿಗೆ 30,000 ರೂಪಾಯಿ ಬಾಂಡಿನೊಂದಿಗೆ ವೈಯಕ್ತಿಕ ಮುಚ್ಚಳಿಕೆ ಆಧಾರದಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

  ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ ಹದಿನಾಲ್ಕಕ್ಕೆ ನ್ಯಾಯಾಲಯ ವಿಸ್ತರಿಸಿದೆ, ಪ್ರಕರಣದ ಆರೋಪ ಪಟ್ಟಿ ಸಲ್ಲಿಸುವ ಮೊದಲು ಕಳೆದವರ್ಷ ಅಕ್ಟೋಬರ್ ಹದಿನೈದರಂದು ದಿಗ್ವಿಜಯ್‌ಸಿಂಗ್‌ರನ್ನು ನಿರಂತರ ಐದುಗಂಟೆಗಳ ಕಾಲ ಪೊಲೀಸರು ಪ್ರಶ್ನಿಸಿದ್ದರು. 1993ರಿಂದ 2003ರ ಅವಧಿಯಲ್ಲಿ ದಿಗ್ವಿಜಯ್ ಸಿಂಗ್‌ರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದಿದೆಯೆನ್ನಲಾದ ವಿಧಾನಸಭಾ ನೇಮಕಾತಿ ಹಗರಣದಲ್ಲಿ ಅವರು ಶಾಮೀಲಾಗಿದರು ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News