×
Ad

ಮಹಿಳಾ ಪೇದೆಗೆ ಹಲ್ಲೆಗೈದ ಶಿವಸೇನಾ ನಾಯಕನ ಡ್ರೈವಿಂಗ್ ಲೈಸನ್ಸ್ ಶಾಶ್ವತ ರದ್ದುಗೊಳಿಸಲು ಶಿಫಾರಸು

Update: 2016-02-27 15:09 IST

ಮುಂಬೈ : ಕರ್ತವ್ಯನಿರತ ಮಹಿಳಾ ಟ್ರಾಫಿಕ್ ಪೇದೆಯೊಬ್ಬರಿಗೆ ಹಲ್ಲೆ ನಡೆಸಿದ್ದ ಶಿವ ಸೇನಾ ಶಾಖಾಪ್ರಮುಖ್ ಶಶಿಕಾಂತ್ ಕಲ್ಗುಡೆಯವರ ಚಾಲನಾ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವಂತೆಟ್ರಾಫಿಕ್ ಪೊಲೀಸರು ಶಿಫಾರಸು ಮಾಡಿದ್ದಾರೆ.

ಈ ಬಗ್ಗೆ ಟ್ರಾಫಿಕ್ ಡಿಸಿಪಿ ರಶ್ಮಿ ಕರಂಡಿಕರ್ಥಾಣೆ ಆರ್‌ಟಿಒಗೆ ಪತ್ರ ಬರೆದಿದ್ದಾರೆ.

‘‘ಮಹಿಳೆಯೊಬ್ಬಳ ಮೇಲೆ ಹಲ್ಲೆಗೈಯ್ಯುವುದು ಒಂದು ಗಂಭೀರ ಅಪರಾಧ. ಆದುದರಿಂದ ನಾನು ಆರ್‌ಟಿಒಗೆ ಪತ್ರ ಬರೆದುಕಲ್ಗುಡೆಯವರ ಚಾಲನಾ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಹೇಳಿದ್ದೇನೆ. ಅವರು ಹಿಂದೆ ಕೂಡ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈಗ ಅವರು ಜೈಲಿನಲ್ಲಿದ್ದಾರೆ,’’ಎಂದು ರಶ್ಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸುಮಾರು 11.30ಕ್ಕೆ ಕಲ್ಗುಡೆ ತಮ್ಮ ಸ್ಕಾರ್ಪಿಯೋ ವಾಹನವನ್ನು ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗಲೇ ಚಲಾಯಿಸುತ್ತಿರುವುದನ್ನು ನೋಡಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೇದೆ ಸೀಮಾ ಕಾಳೆ (29) ಅವರನ್ನು ನಿಲ್ಲಿಸಿ ಅವರ ಲೈಸನ್ಸ್ ಹಾಗೂ ಇತರ ವಾಹನ ಸಂಬಂಧಿತ ದಾಖಲೆಗಳನ್ನು ಕೇಳಿದರು. ಇದನ್ನು ಸಹಿಸದ ಕಲ್ಗುಡೆ ಅವರನ್ನು ನಿಂದಿಸತೊಡಗಿ ಕೊನೆಗೆ ಅವರ ಕೆನ್ನೆಗೆ ಹೊಡೆದು ಬಿಟ್ಟರೆನ್ನಲಾಗಿದೆ. ಸೀಮಾಳ ಮೂಗಿಗೂ ಕಲ್ಗುಡೆ ಗುದ್ದಿದ್ದು ಅವರ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭಿಸಿದಾಗ ಅಲ್ಲಿದ್ದ ಇತರ ಪೊಲೀಸರು ಹಾಗೂ ಸಾರ್ವಜನಿಕರು ಕಲ್ಗುಡೆಯನ್ನು ಹಿಡಿದು ನೌಪಾಡ ಪೊಲೀಸರಿಗೊಪ್ಪಿಸಿದ್ದರು.

ಅವರನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಈ ಸುದ್ದಿ ಹರಡಿದಾಗ ಶಿವಸೇನಾ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಈತನ್ಮಧ್ಯೆಶಿವಸೇನಾ ಬೆಂಬಲಿಗ ಸಚಿವ ಏಕನಾಥ್ ಶಿಂಧೆ ಬ್ಲಾಗೊಂದರಲ್ಲಿಕಲ್ಗುಡೆ ಶಿವ ಸೇನಾ ಸದಸ್ಯರಲ್ಲವೆಂದು ಹೇಳಿದ್ದರು.ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡ ಇದನ್ನೊಂದು ನಾಚಿಕೆಗೇಡು ಘಟನೆ ಹಾಗೂ ಇದಕ್ಕೆ ಯಾವುದೇ ರಾಜಕೀಯ ಬೆಂಬಲವಿಲ್ಲವೆಂದು ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News